ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ದ್ವಾರದ ಬಳಿ ಸ್ಕೂಟರಿಗೆ ಮೀನಿನ ಲಾರಿ ಡಿಕ್ಕಿಯಾಗಿ ಸಹಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಗಾಯಾಳುವನ್ನು ಬಪ್ಪನಾಡು ಬಳಿಯ ನಿವಾಸಿ ಚಂದ್ರಹಾಸ ಶೆಟ್ಟಿ (58) ಎಂದು ಗುರುತಿಸಲಾಗಿದೆ. ಗಾಯಾಳು ಚಂದ್ರಹಾಸ ಶೆಟ್ಟಿ ತಮ್ಮ ಮಗ ಧನುಶ್ ರೊಂದಿಗೆ ಸ್ಕೂಟರಿನಲ್ಲಿ ಮೂಲ್ಕಿ ವಿಜಯಾ ಕಾಲೇಜು ರಸ್ತೆಯಿಂದ ಬಪ್ಪನಾಡು ದೇವಸ್ಥಾನದ ಒಳಭಾಗಕ್ಕೆ ಹೆದ್ದಾರಿ ಕ್ರಾಸ್ ಮಾಡಲು ಯತ್ನಿಸಿದಾಗ ಉಡುಪಿ ಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಮೀನಿನ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಸಹಸವಾರ ರಾಗಿದ್ದ ಚಂದ್ರಹಾಸ ಶೆಟ್ಟಿ ಆಯತಪ್ಪಿ ರಸ್ತೆಗೆ ಬಿದ್ದು ತಲೆಗೆ ಗಾಯಗಳಾಗಿವೆ.
ಅಪಘಾತ ನಡೆದು ಕೆಲ ಹೊತ್ತು ಕಳೆದರೂ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳು ಗಾಯಾಳುವಾಗಿ ಬಿದ್ದಿದ್ದ ಚಂದ್ರಹಾಸ ಶೆಟ್ಟಿಯವರನ್ನು ಆಸ್ಪತ್ರೆಗೆ ಸಾಗಿಸಲು ಬಾರದೆ ಆತಂಕದ ಸ್ಥಿತಿ ಎದುರಾಯಿತು.
ಈ ಸಂದರ್ಭದ ಅದೇ ದಾರಿಯಾಗಿ ಬಂದ ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ ತಮ್ಮ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಗಾಯಾಳು ಚಂದ್ರಹಾಸ್ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಿದ್ದು ಸುರತ್ಕಲ್ ಟ್ರಾಫಿಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ಕೆಲವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಗೊಂಡ ವೇಳೆಯಲ್ಲಿ ಮುಲ್ಕಿ ಬಸ್ಸು ನಿಲ್ದಾಣ, ಬಪ್ಪ ನಾಡು ಜಂಕ್ಷನ್, ಮುಲ್ಕಿ ಬಿಲ್ಲವ ಸಂಘದ ಬಳಿಯ ಜಂಕ್ಷನ್ ಬಳಿ ಸರ್ವಿಸ್ ರಸ್ತೆ ಅರ್ಧಂಬರ್ಧ ಕಾಮಗಾರಿ ನಡೆದಿದ್ದು ಹಲವು ಅಪಘಾತಗಳು ಸಂಭವಿಸಿ ಪ್ರಾಣ ಹಾನಿ ಸಂಭವಿಸಿದ್ದು ಹಲವು ಬಾರಿ ಹೆದ್ದಾರಿ ಇಲಾಖೆಗೆ ದೂರು ನೀಡಿದ್ದರೂ ಕಾಮಗಾರಿ ನಡೆಸಿಲ್ಲ ಹಿಂದೂ ಯುವಸೇನೆಯ ಸ್ಥಾಪಕಾಧ್ಯಕ್ಷ ಗೋವಿಂದ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
03/10/2021 01:17 pm