ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಗೃಹೋಪಯೋಗಿ ಮಾರಾಟ ಮಳಿಗೆಯಲ್ಲಿ ಬೆಂಕಿ, ಅಪಾರ ಸೊತ್ತು‌ಹಾನಿ

ಕಾಪು : ಕಾಪು ಪೇಟೆಯ ಉದಯ ಬಜಾರ್ ಮಳಿಗೆಯಲ್ಲಿ ಶನಿವಾರ ರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳಿಗೆ ನಷ್ಟ ಉಂಟಾಗಿದೆ.

ಶನಿವಾರ ರಾತ್ರಿ ಹೊಗೆ ಕಾಣಿಸಿಕೊಂಡಿದ್ದು, ಅದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿ, ಬಜಾರ್ ಒಳಗೆ ಬೆಂಕಿ ಆವರಿಸಿ ಕೊಂಡಿರುವುದನ್ನು ಗಮನಿಸಿದ್ದರು. ಕೂಡಲೇ ಸ್ಥಳೀಯರು ಉಡುಪಿ‌ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಿವಿ, ಫ್ರಿಡ್ಜ್ ಸಹಿತ ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳು, ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

Edited By : Shivu K
Kshetra Samachara

Kshetra Samachara

26/09/2021 01:23 pm

Cinque Terre

15.69 K

Cinque Terre

0

ಸಂಬಂಧಿತ ಸುದ್ದಿ