ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಮನೆ ಬಳಿ ರಾತ್ರಿ ನಿಲ್ಲಿಸಿದ್ದ ರಿಕ್ಷಾ ಸುಟ್ಟು ಭಸ್ಮ

ಮುಲ್ಕಿ: ಮುಲ್ಕಿ ಸಮೀಪದ ಮೆಡಲಿನ್ ಶಾಲೆ ಬಳಿಯ ನಿವಾಸಿ ಸಂದೀಪ್ ಎಂಬವರ ರಿಕ್ಷಾ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮಂಗಳವಾರ ರಾತ್ರಿ ಮನೆ ಬಳಿ ಸುಟ್ಟು ಭಸ್ಮವಾಗಿದೆ

ರಿಕ್ಷಾ ಚಾಲಕ ಸಂದೀಪ್ ಎಂದಿನಂತೆ ರಾತ್ರಿ ಬಾಡಿಗೆ ಮಾಡಿ ಮಂಗಳವಾರ ರಾತ್ರಿ9:30 ಗಂಟೆಗೆ ಮನೆ ಬಳಿ ತಮ್ಮ ರಿಕ್ಷಾವನ್ನು ನಿಲ್ಲಿಸಿದ್ದರು.ರಾತ್ರಿ

10.30 ಗಂಟೆಗೆ ಮನೆಯವರು ಹೊರಗೆಬಂದು ನೋಡಿದಾಗ ಏಕಾಏಕಿ ರಿಕ್ಷಾಗೆ ಬೆಂಕಿ ತಗಲಿ ಹೊತ್ತಿ ಉರಿಯುತ್ತಿರುವುದು ಕಂಡುಬಂದಿದ್ದು ಕೂಡಲೇ ಮನೆಯವರನ್ನು ಎಚ್ಚರಿಸಿ ಸ್ಥಳಕ್ಕೆ ಧಾವಿಸಿದಾಗ ರಿಕ್ಷಾ ಸುಟ್ಟು ಭಸ್ಮವಾಗಿದೆ.

ಕಳೆದ ಒಂದುವರೆ ವರ್ಷ ತೆಗೆದುಕೊಂಡ ಟಿವಿಎಸ್ ಕಂಪನಿಯ ನೂತನ ರಿಕ್ಷಾ ನೋಡನೋಡುತ್ತಿದ್ದಂತೆ ಸುಟ್ಟು ಭಸ್ಮವಾಗಿದೆ ಎಂದು ಸಂದೀಪ್ ಅಳುತ್ತಾ ಹೇಳಿದ್ದಾರೆ. ರಿಕ್ಷಾದಲ್ಲಿ ಗ್ಯಾಸ್ ಕಿಟ್ ಇದ್ದು ಬೆಂಕಿ ತಗಲದ ಕಾರಣ ಭಾರಿ ಅನಾಹುತ ತಪ್ಪಿದೆ. ರಿಕ್ಷಾದಲ್ಲಿದ್ದ ಗ್ಯಾಸ್ ಬೆಂಕಿ ತಗಲಿದ್ದರೆ ಸಮೀಪದಲ್ಲಿದ್ದ ಮನೆಗೆ ಹಾನಿಯಾಗುವ ಸಾಧ್ಯತೆ ಇತ್ತು. ಏಕಾಏಕಿ ನಡೆದ ಘಟನೆಯಿಂದ ತೀವ್ರ ಬಡತನದ ಕುಟುಂಬದಲ್ಲಿರುವ ಮನೆಯವರು ಕಂಗಾಲಾಗಿದ್ದಾರೆ

ಸ್ಥಳಕ್ಕೆ ಮುಲ್ಕಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ, ಸಂತೋಷ್ ಶೆಟ್ಟಿ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಅವರು ಮಾತನಾಡಿ ಮುಲ್ಕಿ ಪರಿಸರದಲ್ಲಿ ಟಿವಿಎಸ್ ಕಂಪೆನಿಯ ರಿಕ್ಷಾ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಹೋಗಿರುವ ಎರಡನೇ ಘಟನೆ ನಡೆದಿದ್ದು ಬಡಪಾಯಿ ಸಂದೀಪ್ ಕುಟುಂಬಕ್ಕೆ ಕಂಪನಿಯವರು ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು. ಈ ಬಗ್ಗೆ ಸಂಸದರಿಗೆ, ಶಾಸಕರಿಗೆ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದರು.

Edited By : Shivu K
Kshetra Samachara

Kshetra Samachara

25/08/2021 11:59 am

Cinque Terre

17.97 K

Cinque Terre

0

ಸಂಬಂಧಿತ ಸುದ್ದಿ