ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ಮುಲ್ಕಿ ಸಮೀಪದ ಕ್ಷೀರಸಾಗರದ ಬಳಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು ನವಿಲು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ
ಕೂಡಲೇ ಸ್ಥಳಕ್ಕೆ ಕಿನ್ನಿಗೋಳಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ನವಿಲಿನ ಶವವನ್ನು ಸ್ಥಳಾಂತರಿಸಿದ್ದಾರೆ.
ಈ ಬಗ್ಗೆ ಅರಣ್ಯಾಧಿಕಾರಿಗಳು ಮಾತನಾಡಿ ಕಾಡಿನಲ್ಲಿರುವ ನವಿಲುಗಳು ಆಹಾರ ಹುಡುಕಿಕೊಂಡು ನಾಡಿಗೆ ಬರುತ್ತಿದ್ದು ಈಗಾಗಲೇ ಅನೇಕ ಅವಘಡಗಳು ಸಂಭವಿಸಿದೆ. ಅಮಾಯಕ ನವಿಲುಗಳು ಆಕಸ್ಮಿಕವಾಗಿ ಮರಣ ಹೊಂದುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
Kshetra Samachara
01/08/2021 10:00 am