ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಹಿಮ್ಮುಖವಾಗಿ ಬಂದ ಲಾರಿಗೆ ತೆಂಗಿನ ಮರ ಪೀಸ್ ಪೀಸ್

ಮಂಗಳೂರು : ಬ್ರೇಕ್ ಫೇಲ್ ಆಗಿ ಅರ್ಧ ಕಿಲೋಮೀಟರ್ ಹಿಮ್ಮುಖವಾಗಿ ಬಂದ ಮರಳು ತುಂಬಿದ ಲಾರಿತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಹೊರವಲಯದ ತಲಪಾಡಿ-ದೇವಿಪುರ ಬಳಿ ನಡೆದಿದೆ.

ಇನ್ನು ಲಾರಿ ಹಿಮ್ಮುಖವಾಗಿ ಬಂದು ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ದೇವಿಪುರ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನದ ಎದುರು ನಡೆದ ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಿಸುವ ಲಾರಿಗಳು ರಾಷ್ಟ್ರೀಯ ಹೆದ್ದಾರಿ ಬಿಟ್ಟು ಕಳ್ಳ ಮಾರ್ಗದಲ್ಲಿ ಸಾಗುವ ವೇಳೆ ಪೊಲೀಸ್ ಚಕ್ ಪೋಸ್ಟ್ ತಪ್ಪಿಸುವ ವೇಳೆ ಈ ಅವಘಡ ಸಂಭವಿಸಿದೆ.

Edited By : Manjunath H D
Kshetra Samachara

Kshetra Samachara

25/02/2021 02:16 pm

Cinque Terre

22.16 K

Cinque Terre

1

ಸಂಬಂಧಿತ ಸುದ್ದಿ