ಕುಂದಾಪುರ: ನಿನ್ನೆ ರಾತ್ರಿ ಕುಂದಾಪುರದಲ್ಲಿ ಕಾರೊಂದು ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ನಡೆದಿದೆ. ಕುಂದಾಪುರದ ಕೋಡಿ ಬೀಚ್ ರಸ್ತೆಯ ಸಮೀಪ ಇರುವ ಚರ್ಚ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಕಿರಣ್ ಮೇಸ್ತ ಮತ್ತು ರವೀಂದ್ರ ಕುಮಾರ್ ಮೃತ ದುರ್ದೈವಿಗಳು. 25ರ ಹರೆಯದ ಆಸುಪಾಸಿನ ಗೆಳೆಯರಾದ ಇವರು ಒಂದೇ ಬೈಕ್ ನಲ್ಲಿ ತೆರಳುತ್ತಿದ್ದರು. ತಡರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಮಾರುತಿ ಆಲ್ಟೊ ಕಾರು ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ರಸ್ತೆಗೆಸೆಯಲ್ಪಟ್ಟು ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ.
Kshetra Samachara
09/02/2021 12:38 pm