ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ವರ್ಷದ ಮೊದಲ ಕಂಬಳದಲ್ಲೇ 'ಹಳಿ ತಪ್ಪಿದ' ದಾಖಲೆವೀರ ಶ್ರೀನಿವಾಸ ಗೌಡ!

ಬಂಟ್ವಾಳ: ಐಕಳ ಕಂಬಳದಲ್ಲಿ 100 ಮೀಟರ್ ಕಂಬಳಗದ್ದೆ ದೂರವನ್ನು ಕೇವಲ 9.55 ಸೆಕೆಂಡ್ ನಲ್ಲಿ ಕ್ರಮಿಸಿದ್ದ ಶ್ರೀನಿವಾಸ ಗೌಡ ಅವರು, ಈ ಋತುವಿನ ಮೊದಲ ಕಂಬಳದಲ್ಲೇ ಎಡವಿ ಬಿದ್ದು ಗಾಯಗೊಂಡಿದ್ದಾರೆ!

ಈ ವರ್ಷದ ಮೊದಲ ಕಂಬಳ ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ಆರಂಭಗೊಂಡಿತ್ತು. ಈ ಕಂಬಳದಲ್ಲಿ ಭಾಗವಹಿಸಿದ ಮಿಜಾರು ಶ್ರೀನಿವಾಸ ಗೌಡ, ಫ್ರೀ ಕ್ವಾರ್ಟರ್ ಫೈನಲ್ ಕೂಡ ತಲುಪಿದ್ದರು. ಈ ರೋಚಕ ಓಟದ ಸಂದರ್ಭ ಇರುವೈಲು ಪಾಣಿಲ ಬಾಡ ಪೂಜಾರಿಯವರ ನೇಗಿಲು, ಹಿರಿಯ ವಿಭಾಗದ ಕೋಣಗಳನ್ನು ಓಡಿಸುತ್ತಿದ್ದ ವೇಳೆ ಕರೆಯ ಮಧ್ಯಭಾಗಕ್ಕೆ ಡಿಕ್ಕಿ ಹೊಡೆದು ಶ್ರೀನಿವಾಸ ಗೌಡ ಬಿದ್ದು ಬಿಟ್ಟರು!

ಇದರಿಂದಾಗಿ ಶ್ರೀನಿವಾಸ ಗೌಡ ಅವರ ಕೈ ಹಾಗೂ ಎದೆಯ ಭಾಗಕ್ಕೆ ಅಲ್ಪ ಮಟ್ಟಿನ ಗಾಯವಾಗಿವೆ.

ಆ ಬಳಿಕದ ಯಾವುದೇ ಓಟದಲ್ಲಿ ಅವರು ಭಾಗಿಯಾಗಿಲ್ಲ. ಆದರೆ, ಫೆಬ್ರವರಿ 6ರಂದು ನಡೆಯುವ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ ಭಾಗವಹಿಸಲಿದ್ದಾರೆ.

Edited By : Manjunath H D
Kshetra Samachara

Kshetra Samachara

01/02/2021 08:03 pm

Cinque Terre

28.68 K

Cinque Terre

1

ಸಂಬಂಧಿತ ಸುದ್ದಿ