ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ ಸೇತುವೆ ಬಳಿಯ ನದಿ ತೀರದ ರಸ್ತೆಯಲ್ಲಿ ಸಂಚರಿಸುತಿದ್ದ ಕಾರು ಹಠಾತ್ತನೆ ನಂದಿನಿ ನದಿಗೆ ಸರಿದು, ಮುಳುಗಿ ಅದೃಷ್ಟವಶಾತ್ ಈರ್ವರು ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದ ಘಟನೆ ಇಂದು ಬೆಳಿಗ್ಗೆ ನಡೆಯಿತು
ಸ್ಥಳೀಯ ಕೃಷ್ಣಾಪುರ ಕಾಟಿಪಳ್ಳದ ನಿವಾಸಿ ಅಶ್ರಫ್ ಮತ್ತು ಆತನ ಸ್ನೇಹಿತನೊಂದಿಗೆ ಪಾವಂಜೆ ಬಳಿಯ ಅರಾಂದ್" ಎಂಬ ಸ್ಥಳಕ್ಕೆ ತೆರಲಿ ವಾಪಸು ಬರುವ ಹೊತ್ತಿಗೆ ಹಠಾತ್ತನೆ ರಸ್ತೆ ಪಕ್ಕದ ನಂದಿನಿ ನದಿಗೆ ಸರಿದು ಕಾರು ನದಿಯಲ್ಲಿ ಮುಳುಗುತ್ತಿರುವಾಗಲೆ ಅಶ್ರಫ್ ಮತ್ತು ಅವರ ಸ್ನೇಹಿತ ಕಾರ್ ನಿಂದ ಹೊರಬಂದು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡರು
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದಿಂದ ಕ್ರೇನ್ ಮೂಲಕ ಕಾರನ್ನು ನದಿಯಿಂದ ಮೇಲೆತ್ತಲಾಯಿತು.
Kshetra Samachara
05/01/2021 11:03 am