ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸೈಂಟ್ ಮೇರಿಸ್ ದ್ವೀಪದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ

ಮಲ್ಪೆ: ಮಹಾಮಳೆಗೆ ಸಿಲುಕಿರುವ ಉಡುಪಿಯಲ್ಲಿ ಜಲಾವೃತಗೊಂಡ ಮನೆಗಳಲ್ಲಿದ್ದ ಜನರ ಜೊತೆಗೆ ಮೀನುಗಾರರೂ ಸಂಕಷ್ಡಕ್ಕೆ ಸಿಲುಕಿದ್ದು, ಹತ್ತು ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಮೂರು ಬೋಟುಗಳು, ಭಾರೀ ಮಳೆಯಿಂದಾಗಿ ಅವಘಡಕ್ಕೆ ತುತ್ತಾಗಿದ್ದವು. ಬೋಟ್ ಗಳಲ್ಲಿದ್ದ ಮೀನುಗಾರರು ಈಜಿ ಸೈಂಟ್ ಮೇರಿಸ್ ದ್ವೀಪ‌ ತಲುಪಿದ್ದರು.

ಇದೀಗ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ, ಅವರನ್ನೆಲ್ಲ ಮಲ್ಪೆಗೆ ಕರೆತಂದಿದೆ. ಈ ಸಂದರ್ಭ ಇನ್ನೆರಡು ದಿನ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

Edited By :
Kshetra Samachara

Kshetra Samachara

20/09/2020 05:16 pm

Cinque Terre

40.59 K

Cinque Terre

0

ಸಂಬಂಧಿತ ಸುದ್ದಿ