ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಆರ್ಥಿಕ ಸಂಕಷ್ಟ: ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕಾರ್ಕಳ: ಉಡುಪಿ ಜಿಲ್ಲೆಯ ಹಿರ್ಗಾನದಲ್ಲಿ ಉದ್ಯಮಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ, ಹಿರ್ಗಾನ ಸಮೀಪದ ಚಿಕ್ಕಲ್ ಬೆಟ್ಟು ಗ್ರಾಮದ ಕೃಷ್ಣಬೆಟ್ಟು ನಿವಾಸಿ ಸುನಿಲ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡವರು.

ಪುಣೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಇವರು ವಿವಾಹಿತರು, ಲಾಕ್ಡೌನ್ ಸಮಯದಲ್ಲಿ ಊರಿಗೆ ಬಂದವರು ವಾಪಾಸಾಗಿರಲಿಲ್ಲ, ಈ‌ ಮಧ್ಯೆ ಪುಣೆಗೆ ತೆರಳಲು ಟಿಕೆಟ್ ನ್ನೂ ಕಾದಿರಿಸಿದ್ದರು, ಕಳೆದ ಆರು ತಿಂಗಳಿನಿಂದ ಮನೆಯಲ್ಲೇ ಇದ್ದಿದ್ದರಿಂದ ತಮ್ಮ ಹೊಟೇಲ್ ಉದ್ಯಮಕ್ಕೆ ಸಂಬಂಧಿಸಿ ತೀವ್ರ ಚಿಂತಿತರಾಗಿದ್ದರು, ನಿನ್ನೆ ಮದ್ಯಾಹ್ನ‌ ಹೊತ್ತಿಗೆ ಸಹೋದರನ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Edited By :
Kshetra Samachara

Kshetra Samachara

28/09/2020 07:37 am

Cinque Terre

29.16 K

Cinque Terre

0

ಸಂಬಂಧಿತ ಸುದ್ದಿ