ಕಾಪು: ಇಲ್ಲಿನ ಪುರಸಭೆ ವ್ಯಾಪ್ತಿಯ ತೆಂಕು ಕಲ್ಯ ಭಾರತ್ ನಗರ ಪರಿಸರದಲ್ಲಿ ಚಿರತೆಯ ಹೆಜ್ಜೆ ಗುರುತು ಮತ್ತು ರಕ್ತದ ಕಲೆ ಪತ್ತೆಯಾಗಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.
ಚಿರತೆ ಹೆಜ್ಜೆ ಗುರುತು ಕಂಡ ಮನೆಮಂದಿ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಉಪ ವಲಯ ಅರಣ್ಯ ಅಧಿಕಾರಿ ಜೀವನ್ ದಾಸ್ ಶೆಟ್ಟಿ ಪರಿಶೀಲನೆ ನಡೆಸಿ, ಚಿರತೆ ಹೆಜ್ಜೆ ಬಗ್ಗೆ ದೃಢಪಡಿಸಿದ್ದಾರೆ. ರಕ್ತದ ಕಲೆಗಳನ್ನು ಕಂಡ ಅಧಿಕಾರಿಗಳು, ಬೀದಿನಾಯಿ ಮೇಲೆ ಚಿರತೆ ದಾಳಿ ಮಾಡಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಚಿರತೆಯ ಹೆಜ್ಜೆ ಜಾಡನ್ನು ಗುರುತಿಸಿ ಬೋನ್ ಇಟ್ಟು ಸೆರೆ ಹಿಡಿಯಲಾಗುವುದೆಂದು ಅರಣ್ಯಾಧಿಕಾರಿಗಳು ಭರವಸೆ ನೀಡಿದರು. ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಸದಸ್ಯ ಅರುಣ್ ಶೆಟ್ಟಿ ಪಾದೂರು ಹಾಗು ಗ್ರಾಮಸ್ಥರು ಇದ್ದರು.
Kshetra Samachara
14/12/2020 09:30 am