ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ರಸ್ತೆ ಅಪಘಾತದಲ್ಲಿ ಕೆಎಂಎಫ್ ನಿರ್ದೇಶಕ ಸಾವು !

ಉಡುಪಿ : ಕುಂದಾಪುರ ತಾಲೂಕು ಹಾಲಾಡಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೆಎಂಎಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಮೃತಪಟ್ಟಿದ್ದಾರೆ.

ಶಂಕರನಾರಾಯಣದಲ್ಲಿ ಕಾರ್ಯಕ್ರಮ ಮುಗಿಸಿ ಹಾಲಾಡಿಗೆ ಬರುತ್ತಿರುವ ಸಂದರ್ಭ ಈ ಘಟನೆ ನಡೆದಿದೆ,ಹಾಲಾಡಿಯಲ್ಲಿ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಹದ್ದೂರು ರಾಜೀವ ಶೆಟ್ಟಿ ,ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯೆ ಸಾವು ಸಂಭವಿಸಿದೆ.

ಪ್ರಸ್ತುತ ಕೆಎಂಎಫ್ ನ ನಿರ್ದೇಶಕರಾಗಿರುವ ಹದ್ದೂರು ರಾಜೀವ ಶೆಟ್ಟಿ,ಶಂಕರನಾರಾಯಣ ತಾಲೂಕು ಪಂಚಾಯತ್ ನ ಸದಸ್ಯರಾಗಿದ್ದವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Edited By : Nirmala Aralikatti
Kshetra Samachara

Kshetra Samachara

09/12/2020 05:07 pm

Cinque Terre

28.66 K

Cinque Terre

3

ಸಂಬಂಧಿತ ಸುದ್ದಿ