ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ಕೋಲ್ನಾಡು ಬಳಿ ಕಾರು ಪಲ್ಟಿ ಚಾಲಕ ಪಾರು

ಮುಲ್ಕಿ:ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಸಮೀಪದ ಕೋಲ್ನಾಡು ಜಂಕ್ಷನ್ ಬಳಿಯಲ್ಲಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಕಾರು ವಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಕಾರಿನಲ್ಲಿದ್ದ ಚಾಲಕ ಪವಾಡಸದೃಶ ಪಾರಾಗಿದ್ದಾನೆ.ಮಂಗಳೂರಿನಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಕಾರು ಕೋಲ್ನಾಡು ಜಂಕ್ಷನ್ ತಲಪುತ್ತಿದ್ದಂತೆ ಎದುರಿನಲ್ಲಿದ್ದ ವಾಹನ ಏಕಾಏಕಿ ಹೆದ್ದಾರಿ ಬಲಬದಿಗೆ ತಿರುಗಿಸಲು ಯತ್ನಿಸಿದಾಗ ವಾಗನರ್ ಕಾರಿನ ಚಾಲಕ ಗಲಿಬಿಲಿಗೊಂಡು ಬ್ರೇಕ್ ಹಾಕಿದ ರಭಸಕ್ಕೆ ಕಾರು ಪಲ್ಟಿಯಾಗಿದೆ.

ಈ ಸಂದರ್ಭ ಕಾರಿನಲ್ಲಿದ್ದ ಚಾಲಕ ಕಾರ್ಕಳ ಮಥುರಾ ಹೋಟೇಲ್ ಬಳಿಯ ನಿವಾಸಿ ಲೆನೋರ್ನ ಲೂಯಿಸ್(28) ಕಾರಿನೊಳಗೆ ಸಿಲುಕಿಗೊಂಡಿದ್ದು ಕೂಡಲೇ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ತೇಜಪಾಲ್ ಮತ್ತಿತರರು ಸೇರಿಕೊಂಡು ಕಾರಿನಿಂದ ಚಾಲಕನನನ್ನುಹೊರತರುವಲ್ಲಿ ಯಶಸ್ವಿಯಾದರು.ಕಾರಿನ ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ,ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/12/2020 09:05 am

Cinque Terre

24.6 K

Cinque Terre

0

ಸಂಬಂಧಿತ ಸುದ್ದಿ