ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ ಸಮೀಪ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ: ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಉಡುಪಿ: ಮಣಿಪಾಲ ಸಮೀಪದ ದುಗ್ಲಿ ಪದವು ಎಂಬಲ್ಲಿ ತಡರಾತ್ರಿ ಸುಮಾರಿಗೆ ಬೆಂಕಿಬಿದ್ದಿದ್ದು ಬಹಳಷ್ಟು ಆಸ್ತಿಪಾಸ್ತಿ ನಷ್ಟವಾಗುವುದು ಯುವಕರ ಸಮಯಪ್ರಜ್ಞೆಯಿಂದ ತಪ್ಪಿದೆ. ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಮಣಿಪಾಲ ಅಲೆವೂರು ರಸ್ತೆಯ ದುಗ್ಲಿ ಪದವು ಎಂಬಲ್ಲಿ ಆಕಸ್ಮಿಕ ಬೆಂಕಿಬಿದ್ದಿದೆ.

ಈ ಪ್ರದೇಶದಲ್ಲಿ ಬಹಳಷ್ಟು ಜನವಸತಿ ಇದ್ದು 10.30 ಗಂಟೆಗೆ ಬೆಂಕಿಬಿದ್ದಾಗ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರರಾದ ಅಲೆವೂರಿನ ಜಲೇಶ್ ಶೆಟ್ಟಿ ಮತ್ತು ಕುಕ್ಕಿಕಟ್ಟೆಯ ನವೀನ್ ಸೇರಿಗಾರ್ ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಮಾತ್ರವಲ್ಲ,ಈ ಯುವಕರು ಸ್ಥಳೀಯರನ್ನು ಎಬ್ಬಿಸಿ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದಾರೆ. ಯುವಕರ ಸಮಯಪ್ರಜ್ಞೆಯಿಂದ ಬಹಳ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/12/2020 07:39 am

Cinque Terre

25.39 K

Cinque Terre

2

ಸಂಬಂಧಿತ ಸುದ್ದಿ