ಉಡುಪಿ: ಉಡುಪಿಯಲ್ಲಿ ಧುತ್ತೆಂದು ಕಾಣಿಸಿಕೊಂಡ ಮಹಾನೆರೆಗೆ ಪಂಜರ ಮೀನು ಕೃಷಿಕರೊಬ್ಬರ ಬದುಕು ನಲುಗಿ ಹೋಗಿದೆ.
ನೆರೆಗೆ 20 ಲಕ್ಷಕ್ಕೂ ಹೆಚ್ಚು ಮೌಲ್ಯದ ಪಂಜರ ಮೀನುಗಳು ಕೊಚ್ಚಿ ಹೋಗಿದ್ದು, ಮೀನು ಕೃಷಿಕರು ಕಂಗಾಲಾಗಿದ್ದಾರೆ.
ಉಡುಪಿ ಕಲ್ಯಾಣಪುರ ಮೂಡು ಕುದ್ರುವಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಒಟ್ಟು 9 ಪಂಜರದ ಗೂಡುಗಳು ನೀರುಪಾಲಾಗಿವೆ.
ಮೊನ್ನೆ ಏಕಾಏಕಿ ಪಂಜರದ ಮೀನು ಗೂಡುಗಳಿಗೆ ನೀರು ನುಗ್ಗಿದ್ದರ ಪರಿಣಾಮವಾಗಿ 2 ಕೆ.ಜಿ. ಗಾತ್ರದ 6000 ಮೀನುಗಳು, 4 ಇಂಚಿನ ಮೀನಿನ ಮರಿಗಳು ಸಂಪೂರ್ಣ ನಾಶಗೊಂಡಿವೆ.
Kshetra Samachara
22/09/2020 10:16 am