ಬ್ರಹ್ಮಾವರ: ಇಲ್ಲಿನ ಸಕ್ಕರೆ ಕಾರ್ಖಾನೆಯ ಪುನರ್ ನಿರ್ಮಾಣಕ್ಕೆ ಪೂರಕವಾಗಿ ಜಿಲ್ಲೆಯಾದ್ಯಂತ ಕಬ್ಬಿನ ಕೃಷಿಯಲ್ಲಿ ಕ್ರಾಂತಿ ಮಾಡುವ ಸಲುವಾಗಿ ರೈತರಿಗೆ ಕಾರ್ಖಾನೆಯ ವತಿಯಿಂದ ಉಚಿತವಾಗಿ 2 ಲಕ್ಷ ಕಬ್ಬಿನ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಹಾವೇರಿಯಿಂದ ನೀರಾ 86032 ಮಾದರಿಯ ಉತ್ತಮ ತಳಿಯ ಸಸಿಯನ್ನು ತಂದು ವಿತರಣೆ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯ ಕೊಕ್ಕರ್ಣೆ,ಪೆಜಮಂಗೂರು , ನಡೂರು, ಬಾರ್ಕೂರು ,ಉಚ್ಚಿಲ , ಮಡಿ ,ಅಂಪಾರು ,ವಂಡ್ಸೆ ,ಇನ್ನ ,ಹಿರಿಯಡ್ಕ, ಬೆಳ್ಳಂಪಳ್ಳಿ, ಅಲ್ತಾರು, ಪೆರ್ಡೂರು ಮುಂತಾದ ಗ್ರಾಮಗಳ ರೈತರಿಗೆ ಈಗಾಗಲೇ ವಿತರಣೆ ಮಾಡಲಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
Kshetra Samachara
06/04/2022 02:36 pm