ಉಡುಪಿ: ಸಾರ್ವಜನಿಕ ರಸ್ತೆಗೆ ಖಾಸಗಿ ತಡೆ; ಶಾಸಕ ರಘುಪತಿ ಭಟ್ ಭೇಟಿ, ಮಾತುಕತೆ


ಉಡುಪಿ: ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಚಂದ್ರ ಅವರ ಮನೆಯಿಂದ ಹಾದು ಹೋಗುವ ಕೋಟೆ ರಸ್ತೆಗೆ ಖಾಸಗಿ ಜಾಗದವರಿಂದ ತಡೆ ಉಂಟಾಗಿರುವುದರಿಂದ ಇಂದು ಶಾಸಕ ಕೆ. ರಘುಪತಿ ಭಟ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಶಾಸಕರು ಖಾಸಗಿ ಜಾಗದ ಮಾಲೀಕರು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಖಾಸಗಿ ಜಾಗದ ಮಾಲೀಕರು ಶನಿವಾರದ ಒಳಗಾಗಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು.

ಈ ಸಂದರ್ಭ ಕಲ್ಯಾಣಪುರ ಗ್ರಾಪಂ ಅಧ್ಯಕ್ಷ ಕೃಷ್ಣ ದೇವಾಡಿಗ, ಉಪಾಧ್ಯಕ್ಷ ಉದಯ್ ಪೂಜಾರಿ, ಪಂಚಾಯಿತಿ ಸದಸ್ಯರಾದ ಸತೀಶ್ ನೇಜಾರು, ನವೀನ್ ಕಾಂಚನ್, ವಿಶು ಕುಮಾರ್ ಕಲ್ಯಾಣಪುರ, ಮಾಜಿ ಉಪಾಧ್ಯಕ್ಷ ಅಪ್ಪು ಜತ್ತನ್, ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ್ ಮತ್ತು ಉಡುಪಿ ಕಂದಾಯ ನಿರೀಕ್ಷಕ ಉಪೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

Kshetra Samachara

Kshetra Samachara

7 days ago

Cinque Terre

2.66 K

Cinque Terre

0