ಕಾಪು: ಕಾಪು ತಾಲೂಕಿನ ಕುತ್ಯಾರು ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ 65 ಲಕ್ಷ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ರಸ್ತೆ ಉದ್ಘಾಟನೆ ನೆರವೇರಿಸಿದರು.
ಕುತ್ಯಾರು ಕರ್ಮರ್ ಜಿಡ್ಡು ರಸ್ತೆ,ಕುತ್ಯಾರು ಗುತ್ತು ರಸ್ತೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶೆಟ್ಟಿಗಾರ್ ಮನೆ ಬಳಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ಮಾಡಲಾಯಿತು. ಕಳತ್ತೂರು ಗ್ರಾಮದ ಸಾಗು ರಸ್ತೆ,ಕಳತ್ತೂರು ಗ್ರಾಮದ ಅಶೋಕ್ ರಾವ್ ಮನೆಗೆ ಹೋಗುವ ರಸ್ತೆ,ಮಾಂಗದಡಿ ಮುಗ್ಗೆರ್ಕಳ ರಸ್ತೆ,ಅಗರ್ ದಂಡೆ ಶಿರ್ವ ಬಾರ್ಡರ್ ರಸ್ತೆ, 8 ಸೂರ್ಯನಗರ ಸುಂದರ ಮೂಲ್ಯ ಮನೆ ತನಕದ ರಸ್ತೆ
ಉದ್ಘಾಟನೆ ಮಾಡಲಾಯಿತು.
ಜಿಪಂ ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾಪಂ ಸದಸ್ಯೆ ಶಶಿಪ್ರಭಾ ಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಧೀರಜ್ ಶೆಟ್ಟಿ, ಮಾಜಿ ಪಂ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
31/10/2020 01:05 pm