ಉಡುಪಿ: ಕೊಡವೂರು ಮೂಡಬೆಟ್ಟುವಿನ ವೃದ್ಧಾಶ್ರಯಧಾಮದಲ್ಕಿ ಆಶ್ರಯ ಪಡೆದಿದ್ದ ಶೈಲಜಾ ಎಸ್(61) ಎಂಬುವರು 60 ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅ.17ರಂದು ಮಾತ್ರ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
24/08/2022 12:27 pm