ಮಣಿಪಾಲ: ಉಚ್ಚಿಲ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಪಡುಬಿದ್ರೆ ಠಾಣಾಧಿಕಾರಿ ಅಶೋಕ್ ಕುಮಾರ್ ಅವರ ಸಹಕಾರದಿಂದ ಮಣಿಪಾಲ ಹೊಸಬೆಳಕು ಆಶ್ರಮಕ್ಕೆ ದಾಖಲು ಪಡಿಸಿರುವ ಘಟನೆ ಬುಧವಾರ ನಡೆದಿದೆ. ಕಾರ್ಯಚರಣೆಗೆ ವಿನಯಚಂದ್ರ ಸಾಸ್ತಾನ, ಉಚ್ಚಿಲ ಎಚ್ಚ್ ರಫೀಕ್, ಸಿರಾಜ್ ಎನ್, ಸ್ಥಳಿಯ ರಿಕ್ಷಾ ಚಾಲಕರು ಸಹಕರಿಸಿದ್ದಾರೆ.
ಯುವಕನಿಗೆ ಅಂದಾಜು 20 ವರ್ಷ ಎಂದು ಅಂದಾಜಿಸಲಾಗಿದೆ. ಮಾತು ಬರುವುದಿಲ್ಲ. ಕಿವಿ ಕೇಳುವುದಿಲ್ಲ. ಹೆಸರು ವಿಳಾಸ ತಿಳಿದುಬಂದಿಲ್ಲ. ಸಂಬಂಧಿಕರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕಿಸಲು ಸೂಚಿಸಲಾಗಿದೆ. (ಫೋ- 91649 01111)
Kshetra Samachara
30/03/2022 04:21 pm