ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಅಪರೂಪದ 2 ಗಡ್ಡೆಗಳ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.
ಒಂದು ಗರ್ಭಾಶಯ ಗಡ್ಡೆ ಮತ್ತು ಇನ್ನೊಂದು ಅಂಡಾಶಯದ ಗಡ್ಡೆಯನ್ನು ಡಾ. ಮುರಳೀಧರ್ ವಿ. ಪೈ ಮತ್ತು ಡಾ. ರೇಖಾ ಉಪಾಧ್ಯಾಯ ಮತ್ತು ತಂಡ ಯಶಸ್ವಿಯಾಗಿ ನಡೆಸಿತು.
*ಗರ್ಭಾಶಯದ ಗಡ್ಡೆ:
42ರ ಹರೆಯದ ಮಹಿಳೆ ಕಳೆದ 4 ತಿಂಗಳಿಂದ ಹೊಟ್ಟೆ ನೋವು ಮತ್ತು ಹಠಾತ್ ಊತದೊಂದಿಗೆ ವೈದ್ಯರನ್ನು ಭೇಟಿಯಾಗಿದ್ದರು. ಅವರು 8 ತಿಂಗಳ ಗರ್ಭಿಣಿಯಾಗಿದ್ದು ಗರ್ಭಾಶಯದ ಗಾತ್ರಕ್ಕೆ ಅನುಗುಣವಾಗಿ ದೊಡ್ಡ ಗರ್ಭಾಶಯದ ಗಡ್ಡೆಯನ್ನೂ ಹೊಂದಿದ್ದರು. ಗಡ್ಡೆಯ ಬೆಳವಣಿಗೆಯ ವೇಗದಿಂದಾಗಿ ಸರ್ಕೋಮಾ(ಅಪರೂಪದ ಗರ್ಭಾಶಯದ ಕ್ಯಾನ್ಸರ್) ಎಂದು ಶಂಕಿಸಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಎಂಆರ್ ಐ ಸ್ಕ್ಯಾನ್ ದೊಡ್ಡ ಗಡ್ಡೆ ಇರುವುದನ್ನು ಖಾತ್ರಿ ಪಡಿಸಿತು. ಸಮಾಲೋಚನೆ ಮತ್ತು ರೋಗಿಯ ಒಪ್ಪಿಗೆ ನಂತರ ಡಾ. ರೇಖಾ ಉಪಾಧ್ಯಾಯ ಅವರು ಕ್ಷೀಣಗೊಳ್ಳುವ ಮತ್ತು ಸಂಭವನೀಯ ಕ್ಯಾನ್ಸರ್ ವಸ್ತುಗಳ ಸೋರಿಕೆ ತಪ್ಪಿಸಲು ಗರ್ಭಾಶಯವನ್ನು ಗಡ್ಡೆಯೊಂದಿಗೆ ಹಾಗೆಯೇ ತೆಗೆದುಹಾಕಲಾಯಿತು. ಗಡ್ಡೆಯ ತೂಕ 3.1 ಕೆ.ಜಿ. ಇತ್ತು.
* ಅಂಡಾಶಯದ ಗಡ್ಡೆ:
23ರ ಹರೆಯದ ಅವಿವಾಹಿತ ಯುವತಿಯು ದೊಡ್ಡ ಅಂಡಾಶಯದ ಗಡ್ಡೆಯ ತೊಂದರೆಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವರ ಚಿಕ್ಕ ವಯಸ್ಸಿನಿಂದಾಗಿ ಅಪರೂಪದ ಜರ್ಮ್ ಸೆಲ್ ಟ್ಯೂಮರ್ ಇರುವುದನ್ನು ಶಂಕಿಸಲಾಯಿತು ಮತ್ತು ಅದಕ್ಕಾಗಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಇತರ ಸ್ಥಳಗಳಿಗೆ ಗಡ್ಡೆ ಹರಡದಂತೆ ಒಂದು ಅಂಡಾಶಯಕ್ಕೆ ಸೀಮಿತವಾದ ಘನ ಅಂಡಾಶಯದ ಗಡ್ಡೆಯನ್ನು ಎಂ ಆರ್ ಐ ಸ್ಕ್ಯಾನ್ ನಲ್ಲಿ ಪತ್ತೆ ಹಚ್ಚಲಾಯಿತು. ಆದ್ದರಿಂದ ಗಡ್ಡೆಯೊಂದಿಗಿನ ಒಂದು ಬದಿಯ ಅಂಡಾಶಯವನ್ನು ಡಾ. ರೇಖಾ ಉಪಾಧ್ಯಾಯ ಅವರು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದರು. ಯುವತಿ ಅವಿವಾಹಿತರಾಗಿದ್ದರಿಂದ ಗರ್ಭಾಶಯ ಮತ್ತು ಇತರ ಭಾಗದ ಅಂಡಾಶಯ ಉಳಿಸಿದ್ದಾರೆ. ಇದರಿಂದ ಆಕೆ ಮದುವೆಯಾಗಲು ಮತ್ತು ಸ್ವಂತ ಮಕ್ಕಳನ್ನು ಹೊಂದಲು ಸಾಧ್ಯವಾಗಲಿದೆ ಎಂದು ವೈದ್ಯರ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
21/01/2021 05:50 pm