ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ- ಕೋವಿಡ್ ವ್ಯಾಕ್ಸಿನ್ ಡ್ರೈರನ್ ಕಾರ್ಯಕ್ರಮ

ಉಡುಪಿ : ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನದಂತೆ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ, ಕಾರ್ಕಳ ಸಾರ್ವಜನಿಕ ಆಸ್ಪತ್ರೆ ಇವರ ಸಹಯೋಗದೊಂದಿಗೆ ಶುಕ್ರವಾರ ಕಾಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈರನ್ ಆಯೋಜಿಸಲಾಯಿತು.

ನೈಜ ಲಸಿಕೆಯನ್ನು ಹೊರತುಪಡಿಸಿ ಉಳಿದೆಲ್ಲಾ ಲಸಿಕಾ ಪ್ರಕ್ರಿಯೆಯ ಪೂರ್ವಭಾವಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿದ್ದು, ಆಯ್ದ ಫಲಾನುಭವಿಗಳ ವಿವರ ಈಗಾಗಲೇ ಕೋವಿನ್ ಆಪ್ನಲ್ಲಿ ದಾಖಲಾಗಿದ್ದು, ಲಸಿಕಾ ಕಾರ್ಯಕ್ರಮದ ದಿನ ಹಾಗೂ ವೇಳೆ ಕುರಿತು ಅವರಿಗೆ ಸಂದೇಶ ರವಾನಿಸಲಾಗುತ್ತದೆ. ಫಲಾನುಭವಿಗಳಿಗೆ ಕೋವಿಡ್-19 ಮುಂಜಾಗೃತಾ ಕ್ರಮಗಳೊಂದಿಗೆ ಲಸಿಕೆಯನ್ನು ನೀಡುವ ತಾಲೀಮನ್ನು ನಡೆಸಲಾಯಿತು.

ಫಲಾನುಭವಿಗಳಿಗೆ ನಿರೀಕ್ಷಣಾ ಕೊಠಡಿಯಲ್ಲಿ ಸಾಮಾಜಿಕ ಅಂತರದಲ್ಲಿ ಆಸನ ವ್ಯವಸ್ಥೆಯಾಗಿದ್ದು, ಲಸಿಕಾ ಕೊಠಡಿಯಲ್ಲಿ ದಾಖಲೆ ಪರಿಶೀಲನೆ, ಲಸಿಕಾ ವಿತರಣೆ ಹಾಗೂ ಕೋವಿನ್ ಆಪ್ನಲ್ಲಿ ಅಪ್ಲೋಡ್ ಮಾಡುವ ಪ್ರಕ್ರಿಯೆ ನಂತರ ಫಲಾನುಭವಿಗಳು ಅವಲೋಕನ ಕೊಠಡಿಯಲ್ಲಿ ಅರ್ಧ ಗಂಟೆ ಕಾಲ ತಂಗಿದ್ದು, ಅಡ್ಡ ಪರಿಣಾಮಗಳ ಬಗ್ಗೆ ನಿಗಾವಣೆಗೆ ಒಳಪಡಿಸಲಾಯಿತು.

ಲಸಿಕಾ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಲಸಿಕಾ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು, ಶುಶ್ರೂಷಕರು, ತುರ್ತುಚಿಕಿತ್ಸೆ ಔಷಧಗಳು ಹಾಗೂ ಆಂಬುಲೆನ್ಸ್, ಕುಡಿಯುವ ನೀರು ಮುಂತಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 25 ಆರೋಗ್ಯ ಕಾರ್ಯಕರ್ತ ಫಲಾನುಭವಿಗಳು ಭಾಗವಹಿಸಿದ್ದರು.

ಕಾರ್ಕಳ ತಾಲೂಕಿನಲ್ಲಿ 1686 ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಕಾರ್ಯಕರ್ತರನ್ನು ಕೋವಿನ್ ಆಪ್ನಲ್ಲಿ ನೋಂದಣಿ ಮಾಡಲಾಗಿದ್ದು, ಲಸಿಕೆ ಸರಬರಾಜು ಆದ ನಂತರ ಲಸಿಕೆ ನೀಡಲು 21 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಕೋವಿಡ್-19 ವ್ಯಾಕ್ಸಿನ್ ತರಬೇತುದಾರರಾದ ಡಾ. ಹೆಚ್ ಪ್ರಕಾಶ್ ಕುಮಾರ್ ಶೆಟ್ಟಿ, ಡಾ. ಶಮಾ ಶುಕುರ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೆ.ಎಸ್ ರಾವ್ ಹಾಗೂ ಹಿರಿಯ ಶುಶ್ರೂಷಕಿ ಪದ್ಮಾವತಿ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆ ಆಯೋಜಿಸಲಾಯಿತು.

Edited By : Nirmala Aralikatti
Kshetra Samachara

Kshetra Samachara

09/01/2021 10:01 am

Cinque Terre

4.41 K

Cinque Terre

0

ಸಂಬಂಧಿತ ಸುದ್ದಿ