ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ. 15 ರಿಂದ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲ ಓಪಿಡಿ ಸೇವೆಗಳು ಪುನಾರಂಭ

ಉಡುಪಿ; ಅ.15ರಿಂದ ಟಿಎಂಎ ಪೈ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು ಈ ಹಿಂದಿನಂತೆ ಸೇವೆಗೆ ಲಭ್ಯವಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆಸ್ಪತ್ರೆ ಕೋವಿಡ್ -19 ಗೆ ಮೀಸಲಾಗಿತ್ತು ಈಗಲೂ ಕೋವಿಡ್ ಆಸ್ಪತ್ರೆಯಾಗಿ ಮುಂದುವರಿದಿದ್ದರೂ ಹೊರರೋಗಿಗಳ ಕಟ್ಟಡ ಒಳರೋಗಿ ವಿಭಾಗದಿಂದ ಪ್ರತ್ಯೇಕವಾಗಿದೆ.

ಕೋವಿಡ್ -19 ಗೆ ಸಂಬಂಧಿಸಿದ ಎಲ್ಲ ಮುನ್ನೆಚ್ಚರಿಕೆ ಮಾಸ್ಕ್, ದೈಹಿಕ ಅಂತರ, ನೈರ್ಮಲ್ಯೀಕರಣ ಮತ್ತು ಒಪಿಡಿ ಪ್ರದೇಶಗಳಲ್ಲಿ ಜನಸಂದಣಿ ತಪ್ಪಿಸುವುದು ಸೇರಿದಂತೆ ಎಲ್ಲ ಮುಂಜಾಗರೂಕತೆಯೊಂದಿಗೆ ಒಪಿಡಿ ತೆರೆಯಲಾಗುತ್ತಿದೆ.

ಅಗತ್ಯವಿರುವವರು 7259032864 ಗೆ ಕರೆ ಮಾಡಿ ಪೂರ್ವ ಅಪಾಯಿಂಟ್ಮೆಂಟ್ ನೊಂದಿಗೆ ಈ ಸೌಲಭ್ಯ ಪಡೆಯಬಹುದು.

ವಯಸ್ಸಾದವರು, ಮಕ್ಕಳು ಮತ್ತು ಅವಲಂಬಿತ ರೋಗಿಗಳ ಸಂದರ್ಭ ಮಾತ್ರ ಇನ್ನೊಬ್ಬ ವ್ಯಕ್ತಿಯನ್ನು ಒಪಿಡಿ ಪ್ರದೇಶವನ್ನು ರೋಗಿಯೊಂದಿಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ.

ಆಸ್ಪತ್ರೆಗೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯವಾಗಿದೆ.

Edited By : Nirmala Aralikatti
Kshetra Samachara

Kshetra Samachara

13/10/2020 07:27 pm

Cinque Terre

16.51 K

Cinque Terre

0

ಸಂಬಂಧಿತ ಸುದ್ದಿ