ಉಡುಪಿ: ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ(ಆಡಳಿತ) ಎನ್.ಕೆ ಶಿವರಾಜ್ ಅಧಿಕಾರ ಸ್ವೀಕರಿಸಿದ್ದಾರೆ.
ಕಲಬುರಗಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ(ಟಿಟಿಸಿ) ಪ್ರವಾಚಕರಾಗಿದ್ದ ಶಿವರಾಜ್, ಮೈಸೂರು ಮೂಲದವರಾಗಿದ್ದು 1994ರಲ್ಲಿ ಹಾಸನದಲ್ಲಿ ವೃತ್ತಿ ಆರಂಭಿಸಿ ಮುಖ್ಯ ಶಿಕ್ಷಕ, ಬಿಆರ್‌ಸಿ ಕೋ-ಆರ್ಡಿ ನೇಟ, ಇಒ, ಅಕ್ಷರ ದಾಸೋಹ ಕ್ಷೇತ್ರ ಶಿಕ್ಷಣಾಧಿಕಾರಿ, ಡಯಟ್ ಹಿರಿಯ ಉಪನ್ಯಾಸಕ, ಉಪನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿದ್ದರು.
ಉಡುಪಿ ಡಿಡಿಪಿಐ ಮಲ್ಲೇಸ್ವಾಮಿ ವರ್ಗಾವಣೆಯಿಂದ ಮೂರು ತಿಂಗಳಿನಿಂದ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹುದ್ದೆ ತೆರವಾಗಿದ್ದು ಹೆಚ್ಚುವರಿ ಪ್ರಭಾರ ಅಧಿಕಾರವನ್ನು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಟಿಟಿಸಿ) ಪ್ರಿನ್ಸಿಪಾಲ್ ಗೋವಿಂದ ಮಡಿವಾಳ ವಹಿಸಿದ್ದರು.
Kshetra Samachara
16/07/2022 11:51 am