ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸುವ ಹುನ್ನಾರ ನಡೆದಿದೆ: ಭೋಜೇಗೌಡ

ಉಡುಪಿ : ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಇನ್ನು ಕೆಲವೇ ವರ್ಷಗಳಲ್ಲಿ ಮುಚ್ಚಿಸಲು ಉನ್ನತ ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆ. ಅದಕ್ಕಾಗಿ ಶಿಕ್ಷಕರ ನೇಮಕಾತಿಯನ್ನು ಮಾಡುತ್ತಿಲ್ಲ. ಎಲ್ಲ ಶಿಕ್ಷಕರು ನಿವೃತ್ತಿಯಾದ ಬಳಿಕ ಸಿಬ್ಬಂದಿಗಳಿಲ್ಲ ಎಂಬ ನೆಪ ಹೇಳಿ ಶಾಲೆಯನ್ನು ಮುಚ್ಚುವಂತೆ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೆಗೌಡ ಆತಂಕ ವ್ಯಕ್ತಪಡಿಸಿದರು.

ಉಡುಪಿ ಸೈಂಟ್ ಸಿಸಿಲಿಸ್ ಶಾಲಾ ಸಭಾಂಗಣದಲ್ಲಿ ಇಂದು ನಡೆದ ಶಿಕ್ಷಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಶಿಕ್ಷಕರ ಕೊರತೆ ಇರುವ ಅನುದಾನಿತ ಶಾಲೆಗಳಿಗೆ ವಿಶೇಷ ಅನುದಾನದಡಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಒಂದು ವಾರದೊಳಗೆ ಆದೇಶ ಹೊರಡಿಸುವ ನಿಟ್ಟಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮಾನ್ಯತೆ ನವೀಕರಣ ಗೊಂದಲವನ್ನು ಕೂಡಲೇ ನಿವಾರಿಸಲಾಗುವುದು. ಈ ಮಧ್ಯೆ ಅಧಿಕಾರಿಗಳು ಕಿರುಕುಳ ನೀಡಿದರೆ ಕಾನೂನು ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

Edited By : PublicNext Desk
Kshetra Samachara

Kshetra Samachara

22/06/2022 09:29 pm

Cinque Terre

1.57 K

Cinque Terre

0

ಸಂಬಂಧಿತ ಸುದ್ದಿ