ಮಲ್ಪೆ: ಉಡುಪಿಯ ಮಲ್ಪೆ ಬಂದರಿನಲ್ಲಿ ಬೆಳಿಗ್ಗೆ ಮೀನು ಹೊರುವ ಕೆಲಸ ಮಾಡಿಕೊಂಡು ಶಾಲೆಯ ಹೋಗುತ್ತಿದ್ದ ಪುನೀತ್ ನಾಯ್ಕ್ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ಸಾಧನೆ ಮಾಡಿದ್ದ. ಈತನ ವಿಶೇಷ ಸಾಧನೆ ಗುರುತಿಸಿದ, ಕುಡಚಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರಾಜೀವ್, ಮುಂದಿನ ವಿದ್ಯಾಭ್ಯಾಸದ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಳ್ಳುದಾಗಿ ಭರವಸೆ ನೀಡಿದ್ದಾರೆ. ಕೊಪ್ಪಳ ಮೂಲದ ಪುನೀತ್ ಕುಟುಂಬ ಕಳೆದ ಕೆಲವು ವರ್ಷಗಳಿಂದ ಉಡುಪಿಯಲ್ಲಿ ವಾಸವಾಗಿದೆ.
ಆರ್ಥಿಕವಾಗಿ ತೀರಾ ಬಡತನ ಕುಟುಂಬದ ಪುನೀತ್, ತಂದೆ ತಾಯಿಗೆ ನೆರವಾಗಲು ಬೆಳಿಗ್ಗೆ 4.30 ಕ್ಕೆ ಮಲ್ಪೆ ಬಂದರಿನಲ್ಲಿ ಮೀನು ಹೊರುವ ವೃತ್ತಿ ಮಾಡಿ ಶಾಲೆಗೆ ತೆರಳುತ್ತಿದ್ದ. ಸದ್ಯ ಈತನ ಸಾಧನೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಕೂಡ ಆಗಿತ್ತು. ಈತನ ಸಾಧನೆ ಗಮನಿಸಿದ, ಪಿ ರಾಜೀವ್, ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Kshetra Samachara
03/06/2022 01:55 pm