ಉಡುಪಿ : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದು ಸಿಎಫ್ಐ ಉಡುಪಿ ಜಿಲ್ಲಾ ವತಿಯಿಂದ ಧ್ವಜರೋಹಣ ನೆರವೇರಿಸಲಾಯಿತು.
ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾಧ್ಯಕ್ಷ ನವಾಝ್ ಶೇಖ್ ದ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,ಕಳೆದ 11 ವರ್ಷಗಳಲ್ಲಿ ಸಂಘಟನೆ ಮಾಡಿದ ಸಾಧನೆಗಳು ಮತ್ತು ಮುಂದಿನ ಗುರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಜಿಲ್ಲಾ ಉಪಾಧ್ಯಕ್ಷೆ ಝಂಝಂ ಕಪ್ತಿ ಮಾತನಾಡಿದರು. ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಅಸೇಲ್, ತೌಹೀದ್, ಶಾಹಿದ್, ಫರಾಝ್ ಮತ್ತು ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು.ಉಡುಪಿ ನಗರ ಏರಿಯಾ ಅಧ್ಯಕ್ಷ ಅರ್ಫಾಝ್ ನಿರೂಪಿಸಿದರು.
Kshetra Samachara
07/11/2020 11:09 am