ಕಾರ್ಕಳ: ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ರಿ. ವಿಜೇತ ವಿಶೇಷ ಶಾಲೆ ಹಾಗೂ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘ ಸಿ.ಆರ್ ಇ ದಾವಣಗೆರೆ ಇದರ ಸಹಯೋಗದಲ್ಲಿ 4 ಜಿಲ್ಲೆಗಳಿಂದ ಆಗಮಿಸಿದ ವಿಶೇಷ ಶಿಕ್ಷಕರಿಗಾಗಿ ಸಿ ಆರ್ ಇ ತರಬೇತಿ ಕಾರ್ಯಕ್ರಮವನ್ನು ವಿಜೇತ ವಿಶೇಷ ಶಾಲೆಯಲ್ಲಿ ಆಯೋಜಿಸಲಾಯಿತು.
ಉಡುಪಿ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ರತ್ನಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಸಿ ಆರ್ ಇ ಕಾರ್ಯಕ್ರಮದ ಸಂಯೋಜಕ ರಾಜು ತಲತೋಟಿ , ಶ್ರೀ ದುರ್ಗಾ ವಿದ್ಯಾಸಂಘ ಟ್ರಸ್ಟ್ ರಿ.ಅಧ್ಯಕ್ಷರು, ಕೆ.ರಾಧಾಕೃಷ್ಣ ಶೆಟ್ಟಿ, ವಿಶೇಷ ಶಿಕ್ಷಕ ಮತ್ತು ಶಿಕ್ಷಕೇತರ ಸಂಘದ ರಾಜ್ಯಾಧ್ಯಕ್ಷೆ ,ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಜಿಲ್ಲಾಧ್ಯಕ್ಷರಾದ, ರವೀಂದ್ರ ಎಚ್ ಉಪಸ್ಥಿತರಿದ್ದರು.
ಮೈಸೂರು ಚೆಸ್ಕಾಂ ನಿರ್ದೇಶಕರು ಹಾಗೂ ವಿಕಲ ಚೇತನ ಇಲಾಖೆಯ ಮಾಜಿ ನಿರ್ದೇಶಕರು ಜಯವಿಭವ ಸ್ವಾಮಿ ತರಬೇತಿ ಕಾರ್ಯಾಗಾರಕ್ಕ ಭೇಟಿ ನೀಡಿ ಶಿಕ್ಷಕರಿಗೆ ತರಬೇತಿಯ ಅವಶ್ಯಕತೆಗಳ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಪ್ರೇಮಲತಾ ಜಯವಿಭಸ್ವಾಮ ಇವರು ಉಪಸ್ಥಿತರಿದ್ದರು.ಸುಮಾರು 4 ಜಿಲ್ಲೆಗಳಿಂದ ಆಗಮಿಸಿದ ವಿಶೇಷ ಶಿಕ್ಷಕರು ತರಬೇತಿಯ ಸದುಪಯೋಗ ಪಡೆದುಕೊಂಡರು.
Kshetra Samachara
17/08/2022 04:43 pm