ಉಡುಪಿ: ಜಿಲ್ಲೆಯಾದ್ಯಂತ ನಾಗರಪಂಚಮಿ ಆಚರಣೆಗೆ ತಯಾರಿ ನಡೆಯುತ್ತಿದೆ. ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಸರಕಾರದ ಕೋವಿಡ್ ನಿಯಮಾವಳಿ ಅನುಸಾರ ಸರಳವಾಗಿ ಆಚರಿಸಲಾಗಿತ್ತು. ಈ ವರ್ಷ ದೇವಾಲಯಗಳ ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ಸಾರ್ವಜನಿಕ ಆಚರಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.
ನಗರ, ಗ್ರಾಮೀಣ ಭಾಗದಲ್ಲಿ ಜಿಲ್ಲಾದ್ಯಂತ ವ್ಯಾಪಾರ ಚಟುವಟಿಕೆ ಆರಂಭಗೊಂಡಿದೆ. ಸ್ಥಳೀಯ ವ್ಯಾಪಾರಿಗಳು ಮತ್ತು ಹೊರ ಜಿಲ್ಲೆಗಳಿಂದ ವ್ಯಾಪಾರಿಗಳು ನಗರ ಕೇಂದ್ರದ ಮಾರುಕಟ್ಟೆಗೆ ಆಗಮಿಸಿದ್ದಾರೆ. ನಿನ್ನೆ ಸಂಜೆಯಿಂದಲೇ ವ್ಯಾಪಾರ ಚಟುವಟಿಕೆ ಆರಂಭಗೊಂಡಿದೆ.
ಕೃಷ್ಣಮಠ ಪರಿಸರ, ಡಯಾನ ಸರ್ಕಲ್, ಸರ್ವಿಸ್ ಬಸ್ ನಿಲ್ದಾಣ, ಆದಿ ಉಡುಪಿ, ರಥಬೀದಿ, ಕೆ. ಎಂ. ಮಾರ್ಗ, ಚಿತ್ತರಂಜನ್ ವೃತ್ತ, ಮಣಿಪಾಲದಲ್ಲಿ ಹೂವು, ಸೀಯಾಳ, ಕೆಂದಾಳೆ ಸೀಯಾಳ ಖರೀದಿ ಜೋರಾಗಿ ನಡೆಯುತ್ತಿದೆ.
Kshetra Samachara
01/08/2022 05:03 pm