ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಯಾಗಬೇಕು: ಅದಮಾರು ಹಿರಿಯ ಸ್ವಾಮೀಜಿ ಪ್ರತಿಪಾದನೆ

ಉಡುಪಿ: ಶಾಲಾ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಅಗತ್ಯವಿದೆ.ಜೀವನದಲ್ಲಿ ಸಾಧನೆಯ ಹಾದಿಗೆ ಭಗವದ್ಗೀತೆ ಸದಾ ಸ್ಫೂರ್ತಿಯಾಗಿದೆ.

ದಿನಕ್ಕೆ ಕನಿಷ್ಠ ಐದು ಶ್ಲೋಕಗಳನ್ನಾದರೂ ಮನೆಯಲ್ಲಿ ಎಲ್ಲರೂ ಪಠನ ಮಾಡಬೇಕು ಎಂದು ಅದಮಾರು ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆದ ಶ್ರೀಗಳ ಸನ್ಯಾಸದೀಕ್ಷಾ ಸುವರ್ಣ ಮಹೋತ್ಸವದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಭಗವದ್ಗೀತೆ ಪಠ್ಯಕ್ಕೆ ಸೇರಿಸಿದರೆ ಎಲ್ಲಿ ಕೇಸರೀಕರಣವಾಗುತ್ತದೆಯೋ ಎಂಬ ಭಯ ಕೆಲವರಿಗಿದೆ. ನಮ್ಮ ರಾಷ್ಟ್ರಧ್ವಜದ ಮೇಲಿರುವ ಮೊದಲ ಬಣ್ಣವೇ ಕೇಸರಿ. ಇದು ತ್ಯಾಗದ ಸಂಕೇತ. ಆದರೆ ನಮ್ಮ ಜನರು ತ್ಯಾಗಕ್ಕೆ ಸಿದ್ಧರಿಲ್ಲ. ಭೋಗಕ್ಕೆ ಸಿದ್ಧರಿದ್ದಾರೆ. ದೇವರು, ದೇಶದ ಮೇಲೆ ನಿಷ್ಠೆ ಇಲ್ಲದವರಿಗೆ ಕೆಂಪು (ಡೇಂಜರ್‌) ಬಣ್ಣವೇ ಸೂಕ್ತ ಎಂದರು.

ಕಾರ್ಯಕ್ರಮದಲ್ಲಿ ಓಂಪ್ರಕಾಶ ಭಟ್‌ ಮತ್ತು ದೇವಿದಾಸ್‌ ಸಂಪಾದಕತ್ವದಲ್ಲಿ ಹೊರತಂದಿರುವ “ಕೃಷ್ಣಪ್ರಿಯ- ವಿಶ್ವಪ್ರಿಯ’ ಕೃತಿ ಮತ್ತು 2020-22ರ ಅದಮಾರು ಪರ್ಯಾಯದ ಸ್ಮರಣ ಸಂಚಿಕೆ “ವಿಶ್ವಪ್ರಿಯ-ಈಶಪ್ರಿಯ’ ಕೃತಿಯನ್ನು ಶ್ರೀಗಳು ಬಿಡುಗಡೆ ಮಾಡಿದರು.

Edited By : PublicNext Desk
Kshetra Samachara

Kshetra Samachara

12/07/2022 08:27 pm

Cinque Terre

1.34 K

Cinque Terre

2

ಸಂಬಂಧಿತ ಸುದ್ದಿ