ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರೋಟರಿ ಉಡುಪಿ ಸೇವಾ ಯೋಜನೆ ಉದ್ಘಾಟನೆ, ತ್ರಿಕ್ಷೇತ್ರ ಸಾಧಕರಿಗೆ ಸನ್ಮಾನ

ಉಡುಪಿ: ರೋಟರಿ‌ ಉಡುಪಿ ಇದರ ವತಿಯಿಂದ 2022,23ನೇ ಸಾಲಿನ ಸೇವಾ ಯೋಜನೆಗಳ ಉದ್ಘಾಟನೆಯು ಕಡಿಯಾಳಿಯ ಶ್ರೀಮಹಿಷಮರ್ದಿನಿ ರೋಟರಿ ಸ್ಕೌಟ್‌ ಸಭಾ ಭವನದಲ್ಲಿ ಶುಕ್ರವಾರ ನೆರವೇರಿತು.

ಈ‌ ಸಂದರ್ಭ ವೈದ್ಯರ ದಿನ, ಪತ್ರಿಕಾ‌ ದಿನ ಹಾಗೂ ಲೆಕ್ಕ ಪರಿಶೋಧಕರ ದಿನದಂಗವಾಗಿ ಡಾ.ಜಯಂತ್‌ ಕುಮಾರ್, ಪತ್ರಕರ್ತ ಸುಬ್ರಹ್ಮಣ್ಯ ಗಣಪತಿ‌ ಭಟ್ (ಎಸ್.ಜಿ.ಕುರ್ಯ)ಹಾಗೂ ಸಿಎ ಅನಂತ‌ ನಾರಾಯಣ ಪೈ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಜಿಲ್ಲೆ 3182 ಗವರ್ನರ್‌ ಡಾ.ಎಚ್.ಜೆ.ಗೌರಿ‌ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ನೆರವೇರಿಸಿ ಜೀವನ ಸಾರ್ಥಕ ಯೋಜನೆಯಡಿ ದೇಹದಾನಕ್ಕೆ ನೋಂದಣಿ‌ ಸಹಿತ ರೋಟರಿ‌ ಧ್ಯೇಯ, ಸೇವಾ ಯೋಜನೆಗಳ ಕುರಿತು ಮಾತನಾಡಿದರು. ರೋಟರಿ ವಲಯ 4ರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ವಲಯ ತರಬೇತುದಾರ ಡಾ.ಕೆ.ಸುರೇಶ್ ಶೆಣೈ, ವಲಯ4ರ ಸೇನಾನಿ ರಾಜೇಶ್ ಡಿ.ಪಾಲನ್, ರೋಟರಿ ಉಡುಪಿ ನಿಕಟಪೂರ್ವ ಅಧ್ಯಕ್ಷ ಹೇಮಂತ್ ಯು.ಕಾಂತ್ ಉಪಸ್ಥಿತರಿದ್ದರು.‌

ಸನ್ಮಾನಿತರನ್ನು ಸೀತಾರಾಮ ತಂತ್ರಿ, ಜೆ.ಗೋಪಾಲಕೃಷ್ಣ ಪ್ರಭು, ಅನಂತರಾಮ ಬಲ್ಲಾಳ್ ಪರಿಚಯಿಸಿದರು. ವನಿತಾ ಉಪಾಧ್ಯಾಯ‌ ಪ್ರಾರ್ಥಿಸಿದರು. ರೋಟರಿ ಉಡುಪಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿದರು. ಚಂದ್ರಶೇಖರ್‌ ಅಡಿಗ ನಿರೂಪಿಸಿದರು.ರೋಟರಿ ಉಡುಪಿ ಕಾರ್ಯದರ್ಶಿ ಗುರುರಾಜ್ ಭಟ್ ಟಿ.‌ವಂದಿಸಿದರು.

Edited By : PublicNext Desk
Kshetra Samachara

Kshetra Samachara

01/07/2022 02:49 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ