ಕುಂದಾಪುರ: ಕನ್ನಡ ಭಾಷೆ ಹಾಗೂ ಕನ್ನಡಕ್ಕೆ ಶ್ರೇಷ್ಠ ಇತಿಹಾಸವಿದ್ದು ಕುತೂಹಲಕಾರಿ ದೃಷ್ಟಿಯಿಂದ ಅಧ್ಯಯನ ಮಾಡುವುದು ಅಗತ್ಯವಿದೆ ಎಂದು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಸಂಸ್ಥಾಪಕ ಎ. ಎಸ್. ಎನ್ ಹೆಬ್ಬಾರ್ ಹೇಳಿದರು.
ಗುರುವಾರ ಕುಂದಾಪುರದ ಹರ್ಷ ಮಿನಿ ಸಭಾಂಗಣದಲ್ಲಿ ಏರ್ಪಡಿಸಲಾದ ಕನ್ನಡ ಸಾಹಿತ್ಯ ದಿನಾಚರಣೆಯಲ್ಲಿ ಮಾತನಾಡಿ ಕನ್ನಡ ಭಾಷೆ ಕವಿರಾಜ ಮಾರ್ಗ ಕಾಲದಿಂದ ಇಂದಿನವರೆಗೂ ಕನ್ನಡ ಸುಂದರ ಹಾಗೂ ಶ್ರೀಮಂತ ಭಾಷೆಯಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಪ ತಾಲೂಕು ಅಧ್ಯಕ್ಷ ಉಮೇಶ್ ಪುತ್ರನ್ ಕಾರ್ಯದರ್ಶಿ ದಿನಕರ್ ಆರ್ ಶೆಟ್ಟಿ, ಕೋಶಾಧಿಕಾರಿ ಮಂಜುನಾಥ್ ಕೆ. ಎಸ್ ಉಪಸ್ಥಿತರಿದ್ದರು.
Kshetra Samachara
06/05/2022 11:09 am