ಕುಂದಾಪುರ: ಉಡುಪಿ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ವೆನ್ಯನಲ್ ಸೆಂಟರ್ ನಲ್ಲಿ ಬುಧವಾರ ಗೋಧೂಳಿ ಸಮುಹೂರ್ತದಲ್ಲಿ ನಡೆದ 13 ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ 20 ಮಂದಿ ಸತಿ ಪತಿಯರಾದರು.
ತಂದೆಯ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ ನಾಡೋಜ ಡಾ| ಜಿ. ಶಂಕರ್, ವಧೂ ವರರನ್ನು ಆಶೀರ್ವದಿಸಿ ಅತ್ತೆ ಮಾವಂದಿರನ್ನು ತಂದೆ ತಾಯಿಯರಂತೆ ಪ್ರೀತಿಯಿಂದ ನೋಡಿಕೊಳ್ಳಿ, ಗಂಡ ಹಾದಿ ತಪ್ಪಿದಲ್ಲಿ ತಾಯಿಯ ಸ್ಥಾನದಲ್ಲಿ ನಿಂತು ಬುದ್ದಿ ಹೇಳಿ ಎಂದು ವಧುವಿಗೆ ಹಿತನುಡಿದರೆ, ಕೈಹಿಡಿದ ಮಡದಿಯನ್ನು ಪ್ರೀತಿಯಿಂದ ಕಾಣಿ. ದುರ್ವ್ಯಸನಗಳಿಗೆ ಬಲಿಯಾಗದೇ ಮಮತೆ ಗೌರವದಿಂದ ಮನೆಯನ್ನು ಮುನ್ನಡೆಸಿ ಎಂದು ವರರಿಗೆ ಕಿವಿಮಾತು ಹೇಳಿದರು.
Kshetra Samachara
05/05/2022 02:37 pm