ಉಡುಪಿ: ಗ್ರಾಮಂತರ ಕೈಗಾರಿಕೆ, ಜಿಲ್ಲಾ ಪಂಚಾಯತ್, ಉಡುಪಿ ಇದರ ವತಿಯಿಂದ ಗ್ರಾಮೀಣ ವೃತ್ತಿಪರ ಕುಶಲಕರ್ಮಿಗಳಿಗೆ ಕಿಟ್ ನೀಡಲಾಗುತ್ತಿದ್ದು, ಇಂದು ಶಾಸಕ ರಘುಪತಿ ಭಟ್ 6 ಫಲಾನುಭವಿಗಳಿಗೆ ವಿತರಿಸಿದರು.
ಬಡಾನಿಡಿಯೂರು ಗ್ರಾಮದ ಪ್ರಭಾವತಿ ಶ್ರೀಧರ (ಟೈಲರಿಂಗ್), ಕಲ್ಯಾಣಪುರ ಗ್ರಾಮದ ಸಾಧು ಪೂಜಾರಿ (ಎಲೆಕ್ಟ್ರಿಷಿಯನ್), ತೋನ್ಸೆ ಗ್ರಾಮದ ಮುತ್ತಪ್ಪ ಗುರುವ (ಗಾರೆ ಕೆಲಸ), ಚಾಂತಾರು ಗ್ರಾಮದ ಸುನಂದ ನಾಯ್ಕ (ಬ್ಯೂಟಿಷಿಯನ್), ಹಂದಾಡಿ ಗ್ರಾಮದ ದಿನೇಶ ಆಚಾರ್ಯ (ಮರದ ಕೆಲಸ), ಕೊಕ್ಕರ್ಣೆ ಗ್ರಾಮದ ಪ್ರಸನ್ನ ಭಂಡಾರಿ (ಕ್ಷೌರಿಕ) ಸೇರಿದಂತೆ ಒಟ್ಟು ಆರು ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಸದಸ್ಯರಾದ ಸತೀಶ್ ನಾಯ್ಕ್ ಹಾಗೂ ಗ್ರಾಮಾಂತರ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಜಿ. ವಾಮನ ನಾಯ್ಕ, ಕೈಗಾರಿಕಾ ವಿಸ್ತರಣಾಧಿಕಾರಿ ಸತೀಶ್ ಬಸ ಗೌಡರ ಉಪಸ್ಥಿತರಿದ್ದರು.
Kshetra Samachara
30/04/2022 11:54 am