ಕೋಟ :ಸಮಾಜಕ್ಕೆ ನಾವು ನೀಡುವ ನೆರವಿನಿಂದ ನನಗೆ ಸಂತೋಷವಿದೆ, ನಾವು ಸಾಗಿ ಬಂದ ಹಾದಿ ಮರೆಯದಿದ್ದಾಗ ಪ್ರತಿಯೊಬ್ಬರಿಗೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಮನೋಭಾವ ತನ್ನಿಂದ ತಾನೇ ಬೆಳೆಯುತ್ತದೆ ಎಂದು ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು.
ಇದೆ ಸಂದರ್ಭದಲ್ಲಿ ಕೋಟ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ 19 ನೇ ವರ್ಷದ ಉಚಿತ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಕರಾವಳಿ ಕಣ್ಮಣಿ ದಿ. ಕೆ ಸಿ ಕುಂದರ್ ಸ್ಮಾರಕ ದತ್ತಿ ಪುರಸ್ಕಾರವನ್ನು ಡಾ. ಗೋವಿಂದ ಬಾಬು ಪೂಜಾರಿಗೆ ನೀಡಿ ಗೌರವಿಸಲಾಯಿತು. ನನ್ನ ಸೇವೆಯನ್ನು ಗುರುತಿಸಿ ಪುರಸ್ಕಾರ ನೀಡಿದಕ್ಕೆ ನನಗೆ ಖುಷಿಯಾಗಿದೆ. ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡಿ ನಂತರ ಮುಂಬೈಗೆ ಹೋಗಿ ಹೋಟೆಲನಲ್ಲಿ ಪ್ಲೇಟ್ ತೊಳೆದು ಜೀವನವನ್ನು ಆರಂಭಿಸಿ 2007 ರಲ್ಲಿ ಯಶಸ್ಸು ಸಿಕ್ಕಿತು, ಜೀವನದಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ ಹಾಗೂ ಗುರಿ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಆನಂದ ಸಿ ಕುಂದರ್,ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಪ್ರಗತಿಪರ ರೈತ ರವೀಂದ್ರ ಐತಾಳ್, ಪಿ.ಡಿ.ಓ ಜಯರಾಮ್ ಶೆಟ್ಟಿ, ಕೋಟ ನರೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/04/2022 07:09 pm