ಬೈಂದೂರು: ನಮ್ಮ ಸಂಸ್ಕೃತಿ ಬಹುದೊಡ್ಡ ಶ್ರೀಮಂತ ಸಂಸ್ಕೃತಿಯಾಗಿದ್ದು, ಜ್ಞಾನ ಸಂಪಾದನೆಯಿಂದ ಬದುಕಿನ ಅನೇಕ ಅಪೇಕ್ಷೆಗಳನ್ನು ಸಿದ್ದಿಸಿಕೊಳ್ಳಬಹುದಾಗಿದೆ.
ಸಂಪತ್ತು ಕೇವಲ ಜಡವಾದದ್ದು ಸಂಬಂಧಗಳು ಮಾತ್ರ ಶಾಶ್ವತ ಎಂದು ವಿದ್ವಾನ್ ಡಾ. ವಿಜಯ ಮಂಜರು ಹೇಳಿದರು. ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ವೈದಿಕ ಮಂದಿರ ವಠಾರದಲ್ಲಿ ನಡೆದ ಶ್ರೀ ಶಾರದಾ ಸದ್ವಿದ್ಯಾ ವಸಂತ ಶಿಬಿರ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಅರ್ಚಕ ಪುರೋಹಿತ ಪರಿಷತ್ ಜಿಲ್ಲಾಧ್ಯಕ್ಷ ಡಾ. ಚನ್ನಕೇಶವ ಭಟ್ ಸಂಸ್ಕಾರದ ಬೀಜ ಫಲವಾಗಬೇಕಾದರೆ ಸದ್ಗುಣ ಬೆಳೆಸಿಕೊಳ್ಳುವುದು ಅಗತ್ಯ ಎಂದರು.ಶೃಂಗೇರಿ ಪ್ರಾಂತೀಯ ಧರ್ಮಾಧಿಕಾರಿ ವೇದ ಮೂರ್ತಿ ಲೋಕೇಶ್ ಅಡಿಗರು, ಧಾರ್ಮಿಕ ಮಾರ್ಗದರ್ಶಕರಾದ ವಾಸುದೇವ ಕಾರಂತ್ ಹಳಗೇರಿ, ಡಾ. ಸುಬ್ರಹ್ಮಣ್ಯ ಉಡುಪ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/04/2022 04:08 pm