ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟದಲ್ಲಿ 36ನೇ ವರ್ಷದ ಮಂಗಲೋತ್ಸವ ಕಾರ್ಯಕ್ರಮ

ಕೋಟ ಮಣೂರು ಪಡುಕೆರೆ ಸಮೀಪದ ಉದ್ಭವಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ 36ನೇ ವರ್ಷದ ಮಂಗಲೋತ್ಸವ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ ಟಿ. ಮಂಜುನಾಥ್ ಗಿಳಿಯಾರು ಮಾತನಾಡಿ ನಮ್ಮ ಹಿರಿಯರು ಪಸರಿಸಿದ ಭಜನಾ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಹಾಗೇ ಭಜನೆಯೊಂದು ಸಂಸ್ಕಾರದ ಶಿಕ್ಷಣದ ವೇದಿಕೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷ ನವೀನ್ ವಹಿಸಿದ್ದರು.

ಇದೆ ಸಂದರ್ಭದಲ್ಲಿ ಕೋಟ ಗ್ರಾಮ ಪಂಚಾಯತ್ ಸದಸ್ಯ ಪ್ರದೀಪ್ ಸಾಲಿಯಾನ್ ಹಾಗೂ ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್ ಸ್ಪರ್ಧಾಕೂಟದಲ್ಲಿ ಕಂಚಿನ ಪದಕ ವಿಜೇತ ದಿನೇಶ್ ಗಾಣಿಗ, ಅಘೋರೇಶ್ವರ ಟ್ರಾಕ್ ಮ್ಯೂಸಿಕಲ್ ಮುಖ್ಯಸ್ಥ ರವಿ ಬನ್ನಾಡಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯೆ ಚೈತ್ರಾ ಮಣೂರು, ಉದ್ಭವಲಿಂಗೇಶ್ವರ ಭಜನಾ ಮಂಡಳಿ ಗೌರವಾಧ್ಯಕ್ಷ ಹರೀಶ್, ಭಜನಾ ಮಂಡಳಿ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/04/2022 08:36 am

Cinque Terre

1.02 K

Cinque Terre

0

ಸಂಬಂಧಿತ ಸುದ್ದಿ