ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಕೃಷ್ಣಮಠಕ್ಕೆ ಭೇಟಿ: ದೇವರ ದರ್ಶನ

ಉಡುಪಿ: ನೆರೆಯ ಕೇರಳದವನಾಗಿದ್ದರೂ ಉಡುಪಿ ಭೇಟಿಯ ಕನಸು ಬಹಳ ತಡವಾಗಿ ನನಸಾಗುತ್ತಿದೆ . ಕಳೆದ ಹಲವು ಶತಮಾನಗಳಿಂದ ಭಾರತೀಯ ಸನಾತನ ಸದ್ವಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರವಾದುದು.ಇವತ್ತು ಶ್ರೀ ಕೃಷ್ಣನ ದರ್ಶನ ಸ್ವಾಮೀಜಿಯವರ ದರ್ಶನದಿಂದ ಅತ್ಯಂತ ಸಂತೋಷಗೊಂಡಿದ್ದೇನೆ ಎಂದು ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಹೇಳಿದರು.

ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ರಾಜ್ಯಪಾಲರನ್ನು ದಿವಾನರಾದ ವರದರಾಜ ಭಟ್ಟರು ಮತ್ತು ಪುರೋಹಿತರಾದ ಗೌರವದಿಂದ ಬರಮಾಡಿಕೊಂಡರು . ಶ್ರೀ ಕೃಷ್ಣ ಮುಖ್ಯಪ್ರಾಣರು , ಸರ್ವಜ್ಞ ಪೀಠ , ಸುಬ್ರಹ್ಮಣ್ಯ ದೇವರು , ನವಗ್ರಹ ದೇವರ ದರ್ಶನ ಪಡೆದು ತೀರ್ಥ ಪ್ರಸಾದವನ್ನೂ ಸ್ವೀಕರಿಸಿ ಗೋಶಾಲೆಗೆ ಭೇಟಿ ನೀಡಿ ಗೋವುಗಳನ್ನು ಕಂಡು ಅತೀವ ಸಂತಸ ಪಟ್ಟರು .ಬಳಿಕ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥರನ್ನು ಭೇಟಿಯಾಗಿ ಫಲಪುಷ್ಪ ಭಕ್ತಿ ಗೌರವ ಸಮರ್ಪಿಸಿದರು.

Edited By : PublicNext Desk
Kshetra Samachara

Kshetra Samachara

19/03/2022 10:46 am

Cinque Terre

2.11 K

Cinque Terre

0

ಸಂಬಂಧಿತ ಸುದ್ದಿ