ಕಲ್ಯಾಣಪುರ: ಇಂದು ಕೃಷ್ಣಾಂಗಾರಕ ಚತುರ್ದಶೀ ಯೋಗವಿದ್ದುದರಿಂದ ಉಡುಪಿಯ ಸ್ವರ್ಣಾನದಿಯಲ್ಲಿ ನೂರಾರು ಮಂದಿ ಪವಿತ್ರ ತೀರ್ಥ ಸ್ನಾನಗೈದರು.
ಕೃಷ್ಣಾಂಗಾರಕ ಸ್ನಾನಘಟ್ಟ ಇರುವ ಪೆರಂಪಳ್ಳಿ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಬಳಿ ನೂತನ ಸ್ನಾನಘಟ್ಟ ನಿರ್ಮಾಣವಾಗುತ್ತಿರುವುದರಿಂದ ಅಲ್ಲಿ ತೀರ್ಥ ಸ್ನಾನವಿರಲಿಲ್ಲ . ಆದ್ದರಿಂದ ಮೈಸೂರು ಬೆಂಗಳೂರು ಸೇರಿದಂತೆ ನಾಡಿನ ಅನೇಕ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಕಲ್ಯಾಣಪುರದಲ್ಲಿ , ಹಿರಿಯಡ್ಕ ಸಮೀಪ ಪುತ್ತಿಗೆ ಮೂಲ ಮಠ ಹಾಗೂ ಶೀರೂರು ಮೂಲಮಠದ ಬಳಿ ನದೀತೀರದಲ್ಲಿ ಪವಿತ್ರ ಸ್ವರ್ಣಾನದೀ ಸ್ನಾನಗೈದರು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಭಕ್ತರು ಮತ್ತು ಶಿಷ್ಯರೊಂದಿಗೆ ಕಲ್ಯಾಣಪುರದಲ್ಲಿ ನದೀ ಸ್ನಾನಗೈದರು.
Kshetra Samachara
01/03/2022 09:22 pm