ಉಡುಪಿ: ಬಹರೈನ್ ನಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವದ ಅಂಗವಾಗಿ ಗುರು ಸಂಸ್ಮರಣೋತ್ಸವವು ವೈಭವದಿಂದ ನೆರವೇರಿತು. ಬಹರೈನ್ ನಲ್ಲಿ ಉದ್ಯೋಗ ವ್ಯವಹಾರಗಳನ್ನು ನಡೆಸಿಕೊಂಡು ಜೀವನ ನಡೆಸುತ್ತಿರುವ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಭಿಮಾನಿಗಳು ಮತ್ತು ಭಕ್ತರು ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಅಲ್ಲಿನ ಇಸ್ಕಾನ್ ಸಂಸ್ಥೆಯ ಶಾಖೆಯ ಸದಸ್ಯರೂ ಪಾಲ್ಗೊಂಡು ಕೃಷ್ಣ ಭಜನೆಗೈದರು. ಶ್ರೀಗಳವರ ಸಾಧನೆ ಸಿದ್ಧಿಗಳನ್ನು ಸ್ಮರಿಸುವ ಉಪನ್ಯಾಸ , ಭಾವಚಿತ್ರಕ್ಕೆ ಪುಷ್ಪಾರ್ಚನೆ ಇತ್ಯಾದಿಗಳು ನೆರವೇರಿದವು.ಶ್ರೀಗಳ ಸ್ಮರಣೆಯಲ್ಲಿ ನೀಲಾವರ ಗೋಶಾಲೆಗೆ ಒಂದು ದಿನದ ಗೋಗ್ರಾಸ ನಿಧಿಯನ್ನು ಅರ್ಪಿಸಲಾಯಿತು .
Kshetra Samachara
06/01/2022 08:40 pm