ಕಾರ್ಕಳ: ಶ್ರೀನಿವಾಸ ಸೇವಾ ಟ್ರಸ್ಟ್ ಹಾಗೂ ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ ಕಾರ್ಕಳ ಇದರ ಆಶ್ರಯದಲ್ಲಿ ಪಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಸಹಯೋಗದೊಂದಿಗೆ ಉಚಿತ ನ್ಯೂರೋ ಬ್ರೈನ್ ಆರೋಗ್ಯ ಮಾಹಿತಿ ಹಾಗೂ ಅಗ್ನಿಶಾಮಕ ಸುರಕ್ಷತಾ ಮಾಹಿತಿ ಕಾರ್ಯಕ್ರಮವು ನಡೆಯಿತು. ಕಾರ್ಕಳ ಮುಖ್ಯ ರಸ್ತೆಯ ಎಸ್ ಜೆ ಆರ್ಕೆಡ್ ನ ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ನಲ್ಲಿ ಪ್ರಾಂಶುಪಾಲೆ ಸಾಧನ ಜಿ ಆಶ್ರೀತ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಪಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಪಡೀಲ್ , ಮಂಗಳೂರು ಇದರ ಪೈಯರ್ ಸೇಪ್ಟಿ ಆಫೀಸರ್ ಸತ್ಯ ರಾಜ್ , ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಹಾಗೂ ವ್ಯಕ್ತಿಗಳಿಗೆ ಹೃದಯಾಘಾತ ಸಂಭವಿಸಿದಾಗ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು,ಅಗ್ನಿ ಅನಾಹುತ ಸಂಭವಿಸಿದಾಗ ಯಾವ ರೀತಿ ಸಾರ್ವಜನಿಕರು ಬೆಂಕಿ ನಂದಿಸಲು ಕಾರ್ಯ ಪ್ರವ್ರತ್ತರಾಗಬಕು ಎಂಬ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಸ್ ಜೆ ಆರ್ಕೇಡ್ ಮಾಲಕ ಹರೀಶ್ ಆಚಾರ್ಯ, ಅರುಣೋದಯ ವಿಶೇಷ ಶಾಲಾ ಶಿಕ್ಷಕ ಗಿರೀಶ್ ವಿಠಲಾಚಾರ್ಯ ಆಶ್ರೀತ್, ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ ನ ಶಿಕ್ಷಕಿ ಪುಷ್ಪಾಂಜಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳು , ಎಸ್ ಜೆ ಆರ್ಕೇಡ್ ವಸತಿ ಸಂಕೀರ್ಣದ ನಿವಾಸಿಗಳು ಹಾಗೂ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.
Kshetra Samachara
27/11/2021 08:33 pm