ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಕಾರಂತರ ಶಿಸ್ತು, ಸಮಯ ಪ್ರಜ್ಞೆ ನಮಗೆಲ್ಲ ಮಾದರಿ- ರಹೀಂ ಉಚ್ಚಿಲ್

ಕೋಟ: ಡಾ|| ಶಿವರಾಮ ಕಾರಂತರ ಬದುಕಿನಲ್ಲಿ ಅನುಸರಿಸುತ್ತಿದ್ದ ಶಿಸ್ತು, ಸಮಯ ಪ್ರಜ್ಞೆ ನಮಗೆಲ್ಲ ಮಾದರಿಯಾಗಬೇಕು ಜೊತೆಗೆ ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ಹೇಳಿದರು.

ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ಗೆ ಭೇಟಿ ನೀಡಿ ಕಾರಂತ ಪುತ್ಥಳಿ , ರಂಗಮಂದಿರ, ಅಂಗನವಾಡಿ, ಗ್ರಂಥಾಲಯ ವೀಕ್ಷಿಸಿ ಮಾತನಾಡುತ್ತಿದ್ದರು.

ಕಾರಂತರು ಬರೆದಂತೆ ಬದುಕಿ ಮಾದರಿಯಾದವರು, ಅವರ ಬದುಕಿನುದ್ದಕ್ಕೂ ಹೊಸತನದ ಅನ್ವೇಷಣೆ, ಪರಿಸರದ ಕಾಳಜಿ, ಹೋರಾಟದ ಸ್ವರೂಪ ಎಲ್ಲವೂ ಅನುಕರಣೀಯ ಇಂತಹ ಥೀಮಂತ ವ್ಯಕ್ತಿಯ ಬದುಕಿನ ಚಿತ್ರಣ ಮುಂದಿನ ಜನಾಂಗಕ್ಕೆ ರವಾನಿಸುವ ಉದ್ದೇಶದಿಂದ ಸ್ಥಾಪನೆಯಾದ ಈ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯುತ್ತಿರುವ ಚಟುವಟಿಕೆ, ಅಭಿವೃದ್ಧಿ ನೋಡಿ ಸಂತಸವಾಗುತ್ತದೆ, ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.

ಕಾರಂತರ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟರ್

ಶ್ರೀಮತಿ ಪೂರ್ಣಿಮ ಥೀಮ್ ಪಾರ್ಕ್ನ ವಿಶೇಷತೆ ಮತ್ತು ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಯುವ ಬಲ ಜಾಗೃತಿ ಪರಿಷತ್ ಬೆಂಗಳೂರು ಅಧ್ಯಕ್ಷರಾದ ಕುಮಾರಿ ಪ್ರಾಚಿಗೌಡ , ತೋಟಗಾರಿಕೆ ಹಾಗೂ ರೇಷ್ಮೆ ಸಚಿವರ ಆಪ್ತ ಸಹಾಯಕರಾದ ಕೃಷ್ಣ, ಕರ್ನಾಟಕ ಬ್ಯಾರಿ ಅಕಾಡೆಮಿಯ ಸದಸ್ಯರಾದ ಸುರೇಖಾ, ಚಂಚಲಾಕ್ಷಿ, ರೂಪಾ ಶ್ರೀ ವರ್ಕಾಡಿ, ಶಂಶೀರ್ ಬುಡೋಳಿ ಹಾಗೂ ಅಕಾಡೆಮಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

13/02/2021 12:36 pm

Cinque Terre

3.32 K

Cinque Terre

1

ಸಂಬಂಧಿತ ಸುದ್ದಿ