ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀ ಕೃಷ್ಣಮಠದಲ್ಲಿ ಕಾಷ್ಠಶಿಲ್ಪ ಸೊಬಗು ಕಣ್ತುಂಬಿದ ಮಠಾಧೀಶರುಗಳು, ಶ್ಲಾಘನೆ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥರ ಆಶಯದಂತೆ ಕಾಷ್ಠಶಿಲ್ಪ ಹಾಗೂ ಪ್ರಾಚೀನ ಪಾರಂಪರಿಕ ರೀತಿಯಲ್ಲಿ ಗೋಡೆ ಮತ್ತು ಛಾವಣಿಗೆ ವಿಶೇಷ ಮೆರುಗು ನೀಡಲಾಗಿದೆ.

ಇತ್ತೀಚೆಗೆ ನಿರ್ಮಾಣಗೊಂಡ ದೇವರ ದರ್ಶನಕ್ಕೆ ಬರುವ ವಿಶೇಷ ದಾರಿಯನ್ನು, ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಹಾಗೂ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಗಮಿಸಿ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

ಇಂಜಿನಿಯರ್ ರಾಘವೇಂದ್ರ ರಾವ್, ಪರ್ಯಾಯ ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿನ್ತಯ, ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಶೀಕೃಷ್ಣ ಸೇವಾ ಬಳಗದ ವೈ.ಎನ್.ರಾಮಚಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

30/09/2020 01:26 pm

Cinque Terre

3.32 K

Cinque Terre

0

ಸಂಬಂಧಿತ ಸುದ್ದಿ