ಉಡುಪಿ: ಪೂರ್ಣ ಪ್ರಜ್ಞಾ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸೌಮ್ಯ ಲೋಕೇಶ್ ಶೆಟ್ಟಿ ಹಾಗೂ ಡಾ. ಜಿ.ಶಂಕರ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ಉಮೇಶ್ ಮಯ್ಯ ಜೊತೆಗೂಡಿ ಬರೆದ ಬಿ.ಕಾಂ. ತೃತೀಯ ಸೆಮಿಸ್ಟರ್ ತರಗತಿಯ ಕಾಸ್ಟ್ ಆ್ಯಂಡ್ ಮ್ಯಾನೇಜ್ಮೆಂಟ್ ಅಕೌಂಟಿಂಗ್ ಪುಸ್ತಕವನ್ನು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥರು ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಶ್ರೀಪಾದರು ತನ್ನ ಕಾಲೇಜಿನ ಪ್ರತಿಭಾನ್ವಿತ ಪ್ರಾಧ್ಯಾಪಕರಲ್ಲಿ ಒಬ್ಬರಾಗಿರುವ ಸೌಮ್ಯ ಶೆಟ್ಟಿಯವರು ಬರೆದ ಮೊದಲ ಪುಸ್ತಕಕ್ಕೆ ಶುಭ ಹಾರೈಸಿ, ಇನ್ನಷ್ಟು ಪುಸ್ತಕ ಬರೆಯುವಂತಾಗಲಿ ಎಂದು ಹಾರೈಸಿದರು.
ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ, ಡಾ.ಜಿ.ಶಂಕರ್ ಕಾಲೇಜಿನ ಪ್ರಾಧ್ಯಾಪಕ ಡಾ.ಉಮೇಶ್ ಮಯ್ಯ ಹಾಗೂ ಪಿಪಿಸಿ ಉಪ ಪ್ರಾಂಶುಪಾಲ ಡಾ.ಪ್ರಕಾಶ್ ರಾವ್, ಅಧ್ಯಾಪಕರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಜ್ಯೋತಿ ಆಚಾರ್ಯ ಸ್ವಾಗತಿಸಿದರು. ಸೌಮ್ಯ ಎಲ್. ಶೆಟ್ಟಿ ವಂದಿಸಿದರು. ಮೀನಾಕ್ಷಿ ಆಚಾರ್ಯ ನಿರೂಪಿಸಿದರು.
Kshetra Samachara
27/09/2020 07:03 pm