ಕಾರ್ಕಳ : ಹಿರಿಯರ ಒಡನಾಟದಿಂದ ಧನಾತ್ಮಕ ಚಿಂತನೆಗಳು ಸದಾ ಜಾಗೃತವಾಗಿರುತ್ತವೆ. ವಿಶ್ರಾಂತ ಮುಖ್ಯೋಪಾಧ್ಯಾಯ ಕೆ. ರಾಮಕೃಷ್ಣ ಹೆಬ್ಬಾರ್ ಇಂದಿಗೂ ಇಡೀ ಸಮಾಜದ ಯುವ ಜನಾಂಗಕ್ಕೆ ಸದಾ ಮಾರ್ಗದರ್ಶನ ಮಾಡುತ್ತಾ ಇದ್ದಾರೆ ಎಂದು ಹೆಬ್ರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ಹೇಳಿದರು.
ಅವರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆದಿಗ್ರಾಮೋತ್ಸವ ಸಮಿತಿ ಸಹಕಾರದೊಂದಿಗೆ ಆಯೋಜಿಸಿದ್ದ ’ಹಿರಿಯರೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ಹೆಬ್ಬಾರ್ ಅವರನ್ನು ಗೌರವಿಸಿ ಮಾತನಾಡಿದರು.
"ಮನುಷ್ಯ ಸದಾ ಪ್ರಯತ್ನಶೀಲನಾಗಿದ್ದು, ಪ್ರಗತಿ ಪಥದಲ್ಲಿ ಸಾಗಬೇಕು. ಗೌರವಗಳು ಸೇವೆಗೆ ಸಂದ ವಿಶ್ವಾಸ" ಎಂದು ಸನ್ಮಾನ ಸ್ವೀಕರಿಸಿದ ರಾಮಕೃಷ್ಣ ಹೆಬ್ಬಾರ್ ಹೇಳಿದರು. ಅವರ ಪತ್ನಿ ವರದಾ ಆರ್.ಹೆಬ್ಬಾರ್ ಅವರನ್ನು ಗೌರವಿಸಲಾಯಿತು.
ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ವ್ರದ್ಧಾಶ್ರಮಗಳನ್ನು ಕಡಿಮೆ ಮಾಡಿ ಅವರಿಗೆ ಕುಟುಂಬ ಪ್ರೀತಿ ತೋರ ಬೇಕು ಎಂಬ ಮಹಾನ್ ಸಂದೇಶ ನೀಡುತ್ತಿದೆ ಎಂದು ಲಯನ್ಸ್ ಡಯಾಬಿಟಿಸ್ ನಿಯಂತ್ರಣ ವಿಭಾಗದ ಜಿಲ್ಲಾ ನಿರ್ದೇಶಕ ಡಾ.ಕೆ.ಸುದರ್ಶನ್ ಹೆಬ್ಬಾರ್ ಹೇಳಿದರು. ಸಮಿತಿ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು.
ವಿಶ್ರಾಂತ ಮುಖ್ಯೋಪಾಧ್ಯಾಯತ್ರಯರಾದ ಮೌರೀಸ್ ತಾವ್ರೋ ಅಜೆಕಾರು, ಎ.ಶಾಂತಿರಾಜ ಹೆಗ್ಡೆ, ಮಕರಂದ ಎಸ್. ಹೆಗ್ಡೆ ಅತಿಥಿಗಳಾಗಿದ್ದರು. ಹಾಡಿಗರಡಿ ಅಡಳಿತ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ನೆಲ್ಲಿಕಟ್ಟೆ, ಸತ್ಯನಾರಾಯಣ ಹೆಬ್ಬಾರ್, ಶಾಂತಿ ಕುಂದಾಪುರ, ಸುನಿಧಿ, ಸುನಿಜ ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು ಸ್ವಾಗತಿಸಿ, ವಂದಿಸಿದರು.
Kshetra Samachara
27/09/2020 11:44 am