ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟಪಾಡಿ: ಕೂಲಿ ಕಾರ್ಮಿಕನ ಹೃದಯ ಶ್ರೀಮಂತಿಕೆಗೆ ಸಾಟಿ ಇಲ್ಲ!

ಇವರು ಒಬ್ಬ ಶ್ರಮಜೀವಿ.ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುವ ಇವರು ,ಅಷ್ಟಮಿಯ ಸಂದರ್ಭ ವೈವಿಧ್ಯಮಯ ವೇಷ ಹಾಕಿ ಲಕ್ಷಗಟ್ಟಲೆ ಹಣ ಸಂಗ್ರಹಿಸಿ ರೋಗಿಗಳಿಗೆ ಕೊಡುವ ಹೃದಯ ವೈಶಾಲ್ಯತೆ ಇವರದ್ದು.ಈತನಕ ವೇಷ ಹಾಕಿ ಬರೋಬ್ಬರಿ 89 ಲಕ್ಷದ 75 ಸಾವಿರ ರೂಪಾಯಿಯಷ್ಟು ಸಂಗ್ರಹ ಮಾಡಿ ಬಡಮಕ್ಕಳಿಗೆ,ಬಡ ರೋಗಿಗಳಿಗೆ ನೀಡಿದ್ದಾರೆ.

ಕೇವಲ ಕೃಷ್ಣಾಷ್ಟಮಿ ಸಂದರ್ಭ ವೇಷಧರಿಸಿ ಹಣ ನೀಡುತ್ತಿದ್ದ ರವಿ ಕಟಪಾಡಿ, ಈ ಬಾರಿ ಸಂಘ-ಸಂಸ್ಥೆಗಳು ಸನ್ಮಾನ ಸಂದರ್ಭ ನೀಡಿದ ಹಣ ಮತ್ತು ದಾನಿಗಳು ತಮ್ಮ ಅಕೌಂಟಿಗೆ ಕಳಿಸಿದ ಹಣವನ್ನು ಸೇರಿಸಿ 2 ಲಕ್ಷ ರೂಪಾಯಿಯನ್ನು ಅನಾರೋಗ್ಯಪೀಡಿತ ಮಕ್ಕಳಿಗೆ ನೀಡಿದ್ದಾರೆ! ಹೌದು ,ಇಂತಹ ಮಾನವೀಯ ಕಳಕಳಿ ಇರುವ ವ್ಯಕ್ತಿ ರವಿ ಕಟಪಾಡಿ.

ಉಡುಪಿ ಜಿಲ್ಲೆಯ ಕೊಳಲಗಿರಿ ಮೋಹನ್ ಮತ್ತು ಗಿರಿಜಾ ದಂಪತಿಯ ಆರು ವರ್ಷದ ಮಗು ಧೃತಿ ನರ ಸಮಸ್ಯೆಯಿಂದ ಬಳಲುತ್ತಿದ್ದಾಳೆ.ಈಕೆಗೆ ರವಿ ಕಟಪಾಡಿ 1 ಲಕ್ಷ ರೂಪಾಯಿ ಸಹಾಯ ಮಾಡಿದ್ದಾರೆ. ಇನ್ನು ,ರತ್ನಾಕರ ಕೊಟ್ಟಾರಿ ಮತ್ತು ನಾಗಶ್ರೀ ದಂಪತಿ 18 ದಿನದ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದುದನ್ನು ಮನಗಂಡು , 1 ಲಕ್ಷ ರೂಪಾಯಿ...ಹೀಗೆ ಒಟ್ಟು ಎರಡು ಲಕ್ಷ ರೂಪಾಯಿ ಸಹಾಯಹಸ್ತ ನೀಡಿದ್ದಾರೆ. ಕಟಪಾಡಿಯ ಪೇಟೆಬೆಟ್ಟು ಶ್ರೀ ಬಬ್ಬು ಸ್ವಾಮಿ ದೇವಸ್ಥಾನದಲ್ಲಿ ಫಲಾನುಭವಿಗಳಿಗೆ ರವಿ ಕಟಪಾಡಿ ಧನ ಸಹಾಯ ವಿತರಿಸಿದರು.

ಒಂದು ಕೋಟಿ ರೂಪಾಯಿ ಮೀರಿ ಬಡವರಿಗೆ ಸಹಾಯ ಮಾಡಬೇಕೆಂಬುದು ಇವರ ಗುರಿ ಮತ್ತು ಆಸೆ. ಈಗಾಗಲೇ ವೇಷಗಳ ಮೂಲಕ 89 ಲಕ್ಷ ಧನ ಸಂಗ್ರಹಿಸಿ ಬಡವರಿಗೆ ದಾನ ಮಾಡಿರುವ ರವಿ ಕಡಪಾಡಿ ,ಮುಂದಿನ ಅಷ್ಟಮಿಗೆ ಒಂದು ಕೋಟಿ ತಲುಪಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ!

ವಿಶೇಷ ವರದಿ: ರಹೀಂ ಉಜಿರೆ ಪಬ್ಲಿಕ್ ನೆಕ್ಸ್ಟ್ ಉಡುಪಿ

Edited By :
PublicNext

PublicNext

09/06/2022 05:57 pm

Cinque Terre

28.64 K

Cinque Terre

3

ಸಂಬಂಧಿತ ಸುದ್ದಿ