ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ ಚಿನ್ನಾಭರಣ ಅಂಗಡಿಗಳಿಗೆ ಕನ್ನ: 4 ಲ.ರೂ ಮಿಕ್ಕಿ ಮೌಲ್ಯದ ಚಿನ್ನಾಭರಣ ಕಳವು

ಹೆಬ್ರಿ: ಆಗುಂಬೆ ರಸ್ತೆಯ ಕೆನರಾ ಬ್ಯಾಂಕ್ ಕೆಳಗಡೆ ಇರುವ ಹರೀಶ್ ಹೆಗ್ಡೆ ಅವರ ಶ್ರೀಗಣೇಶ್ ಎಂಬ ಜ್ಯುವೆಲರಿ ಅಂಗಡಿಯ ರೋಲಿಂಗ್ ಶಟರ್ ಮುರಿದು ಮಂಗಳವಾರ ತಡರಾತ್ರಿ ಒಳನುಗ್ಗಿದ ಕಳ್ಳರು ಶೋಕೇಸ್ ನಲ್ಲಿ ಹಾಗೂ ಸೇಲ್ ಕೌಂಟರ್ ನಲ್ಲಿರಿಸಿದ್ದ 3,50,000 ಮೌಲ್ಯದ 5 ಕೆಜಿ ಹೊಸ ಬೆಳ್ಳಿ ಹಾಗೂ ಒಂದು ಕೆಜಿ ಹಳೆ ಬೆಳ್ಳಿ ಆಭರಣಗಳು ಸೇರಿದಂತೆ ಒಂದು ಪವನ್ ತೂಕದ ಎರಡು ಚಿನ್ನದ ಉಂಗುರಗಳನ್ನು ಕಳವು ಗೈದಿದ್ದಾರೆ.

ಇನ್ನೊಂದೆಡೆ ಹೆಬ್ರಿ ಕುಚ್ಚೂರು ರಸ್ತೆಯಲ್ಲಿರುವ ರುದ್ರಯ್ಯ ಆಚಾರ್ಯ ಎಂಬವರಿಗೆ ಸೇರಿದ ಶ್ರೀ ರಾಜರಾಜೇಶ್ವರಿ ಜ್ಯುವೆಲ್ಲರ್ ಅಂಗಡಿಯ ಶಟರ್ ಮುರಿದು ಒಳ ಪ್ರವೇಶಿಸಿರುವ ಕಳ್ಳರು ಶೋಕೇಸಿನಲ್ಲಿರಿಸಿದ್ದ 50 ಗ್ರಾಂ ಇರುವ ಬೆಳ್ಳಿಯ ಹವಳ ಇರುವ ಕನಕಮಾಲೆ ಬೆಳ್ಳಿಯ ಗುಂಡು ಇರುವ ಕರಿಮಣಿ ಸರ , ಬೆಳ್ಳಿಯ ಹಳೆಯ ಕರಿಮಣಿ ಸರವನ್ನು ಕಳವುಗೈದಿದ್ದಾರೆ.

ಕಳುವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು 4 ಲಕ್ಷ ರೂ ಇರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಮಹತ್ವದ ವಿಚಾರಗಳನ್ನು ಕಲೆಹಾಕಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

14/09/2022 08:35 pm

Cinque Terre

2.39 K

Cinque Terre

0

ಸಂಬಂಧಿತ ಸುದ್ದಿ