ಕಾರ್ಕಳ: ತಾಲೂಕಿನ ಬಜಗೋಳಿ ಎಂಬಲ್ಲಿ ಶನಿವಾರ ಮಧ್ಯಾಹ್ನ ತರಕಾರಿ ಅಂಗಡಿ ಮಾಲಕರ ನಡುವೆ ವ್ಯಾಪಾರದ ವಿಚಾರದಲ್ಲಿ ಜಗಳವಾಗಿ ಪರಸ್ಪರ ಹೊಡೆದಾಟ ನಡೆದಿರುವ ಕುರಿತಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ
ಕಾರ್ಕಳ ತಾಲೂಕಿನ ನೂರಾಳು ಬೆಟ್ಟು ಗ್ರಾಮದ ಹೆಬ್ಬಾರ್ ಬೆಟ್ಟು ನಿವಾಸಿ ಜಿನೇಶ್ ಎಂಬವರು ಬಜೆಗೋಳಿ ಮಾರ್ಕೆಟ್ ಪ್ರಾಂಗಣದಲ್ಲಿ ತರಕಾರಿ ಅಂಗಡಿಯಲ್ಲಿ ಇಟ್ಟುಕೊಂಡಿದ್ದು ಇವರ ಅಂಗಡಿಗೆ ಪಕ್ಕದಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದ ಪ್ರಸನ್ನ ಎಂಬವರು ಶನಿವಾರ ಮಧ್ಯಾಹ್ನ ಜಿನೇಶ್ ಅವರ ಅಂಗಡಿಗೆ ಬಂದು ಎರಡು ಕಟ್ಟು ಸ್ಪ್ರಿಂಗ್ ಆನಿಯನ್ ಬೇಕೆಂದು ಖರೀದಿಸಿದ್ದರು. ಇದಕ್ಕೆ 40 ರೂಪಾಯಿ ಹಣ ಕೇಳಿದಾಗ ನಿನ್ನ ಸ್ಟ್ರಿಂಗ್ ಆನಿಯನ್ ಯಾರಿಗೆ ಬೇಕು ಎಂದು ಏಕಾಎಕಿ ಸಿಟ್ಟುಗೊಂಡು ಸ್ಪ್ರಿಂಗ್ ಆನಿಯನ್ ಅನ್ನು ಎಸೆದು ಪಕ್ಕದಲ್ಲಿದ್ದ ಚೂರಿಯಲ್ಲಿ ಜಿನೇಶ್ ಅವರಿಗೆ ಇರಿಯಲು ಬಂದ ಸಂದರ್ಭದಲ್ಲಿ ತಪ್ಪಿಸಿಕೊಂಡ ಪರಿಣಾಮವಾಗಿ ಜಿನೇಶ್ ಬೆನ್ನಿಗೆ ಚೂರಿತ ತಗುಲಿ ಗಾಯವಾಗಿದೆ ಹಾಗೂ ಆರೋಪಿ ಪ್ರಸನ್ನ ಬೆದರಿಕೆ ಹಾಕಿದ್ದಾರೆಂದು ಜಿನೇಶ್ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ತರಕಾರಿ ವ್ಯಾಪಾರಿ ಬಜಗೋಳಿ ದಿಡಿಂಬಿರಿ ನಿವಾಸಿ ಪ್ರಸನ್ನ ಅವರ ಪತ್ನಿ ಪ್ರತಿಮಾ ಜಿನೇಶ್ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ
ಪ್ರತಿಮಾ ಹಾಗೂ ಪ್ರಸನ್ನ ಸ್ಟ್ರಿಂಗ್ ಆನಿಯನ್ ಖರೀದಿಸಲು ಜಿನೇಶ್ ಅವರ ಅಂಗಡಿಗೆ ಹೋಗಿದ್ದಾಗ ಹಣದ ವಿಚಾರದಲ್ಲಿ ಜಗಳವಾಗಿದ್ದು ಅಂಗಡಿ ಮಾಲೀಕ ಜಿನೇಶ್ ಏಕಾಎಕಿ ತನ್ನ ಗಂಡ ಪ್ರಸನ್ನವರನ್ನು ನೆಲಕ್ಕೆ ದೂಡಿ ಕುತ್ತಿಗೆ ಹಿಡಿದು ತಲೆ,ಎದೆ ಹಾಗೂ ಮುಖಕ್ಕೆ ಹಲ್ಲೆ ನಡೆಸಿದಾಗ ಇದನ್ನು ತಡೆಯಲು ಹೋದ ತನಗೂ ದೂಡಿ ಜೀವ ಬೆದರಿಕೆಯೊಡ್ಡಿದ್ದಾನೆಂದು ಪ್ರತಿಮಾ ಜಿನೇಶ್ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಗೆ ಪ್ರತಿ ದೂರು ನೀಡಿದ್ದಾರೆ
ಈ ಘಟನೆಯಲ್ಲಿ ಎರಡು ಕಡೆಯವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
Kshetra Samachara
11/09/2022 03:08 pm