ಮಣಿಪಾಲ: ಇಲ್ಲಿಗೆ ಸಮೀಪದ ಪರ್ಕಳ ನಗರದ ಹೃದಯಭಾಗದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಸಾಮಗ್ರಿಗಳು ರಾತ್ರಿ ವೇಳೆ ಕಳವಾಗಿವೆ. ಕಾಂಕ್ರೀಟ್ ಗೆ ಬಳಸುವ ಕಬ್ಬಿಣದ ಸಾಮಗ್ರಿಗಳನ್ನು ಕಳ್ಳರು ಕಳವು ಮಾಡಿದ್ದಾರೆ.ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿದ್ದು ಪಕ್ಕದಲ್ಲಿರುವ ಬ್ಯಾಂಕ್, ಹೋಟೇಲ್ ನ ಸಿಸಿ ಕ್ಯಾಮರಾವನ್ನು ಪರಿಶೀಲಿಸುತ್ತಿದ್ದಾರೆ.
ಪರ್ಕಳ ಪೇಟೆಯಲ್ಲೇ ಈ ಕೃತ್ಯ ನಡೆದಿರುವುದರಿಂದ ಪೇಟೆಯಲ್ಲಿರುವ ಅಂಗಡಿ ಮುಂಗಟ್ಡುಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸ್ಥಳೀಯರಾದ ಗಣೇಶ್ ರಾಜ್ ಮತ್ತಿತರರು ಆಗ್ರಹಿಸಿದ್ದಾರೆ.
Kshetra Samachara
17/08/2022 06:49 pm