ಕುಂದಾಪುರ: ಶಿರೂರು ಗ್ರಾಮದ ಹಡವಿನಕೋಣಿಯ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ 80 ಕ್ವಿಂಟಾಲ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಆಹಾರ ನಿರೀಕ್ಷಕ ವಿನಯ ಕುಮಾರ್, ಶಿರೂರು ಗ್ರಾಮ ಲೆಕ್ಕಿಗ ಪ್ರಕಾಶ್ ರಾಠೋಡ್ ಬೈಂದೂರು ಪೊಲೀಸರ ಸಹಕಾರದಲ್ಲಿ ಈ ಕಾರ್ಯಾಚರಣೆ ನಡೆಯಿತು. ಶಿರೂರು ಗ್ರಾಮ ಹಡವಿನಕೋಣಿ ಎಂಬಲ್ಲಿ ಖಾಜಿ ಹಸನ್ ಎಂಬವರ ಗೋದಾಮಿನಲ್ಲಿ ಅಕ್ಕಿ ಸಂಗ್ರಹಿಸಿಡಲಾಗಿತ್ತು. ಖಾಜಿ ಹಸನ್ ಗೆ ಸೇರಿದ ಗ್ರೀನ್ ವಿವ್ ಕಾಂಪೌಂಡ್‌ನಲ್ಲಿ ತಲಾ 50 ಕೆ.ಜಿ ಬೆಳ್ತಿಗೆ ಅಕ್ಕಿ ಇರುವ ಒಟ್ಟು 160 ಚೀಲಗಳು ಇದ್ದವು. ಅಕ್ಕಿಯ ಮೌಲ್ಯ 1,92 ಲಕ್ಷ ರೂ. ಗೋದಾಮಿನಲ್ಲಿದ್ದ 160 ಅಕ್ಕಿ ಚೀಲ, 10 ಖಾಲಿ ಗೋಣಿ ಚೀಲ ಸ್ವಾಧೀನಪಡಿಸಿಕೊಂಡಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
28/07/2022 12:56 pm